24.6 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಇಂದಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಇಂದಬೆಟ್ಟು: ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು ಮತ್ತು ನಾವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 25ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಆನಂದ್ ಭಟ್, ಸತೀಶ್ ಬೆಳ್ಳೊರು ಗುತ್ತು, ಗೌರವ ಅಧ್ಯಕ್ಷರಾದ ಡಾಕ್ಟರ್ ಪ್ರದೀಪ್ ನಾವೂರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸಂಜೀವ ಗೌಡ ಮನ್ನಡ್ಕ, ಪ್ರಾ.ಕಾರ್ಯದರ್ಶಿ ಗಣೇಶ್ ನಾವೂರು, ಧರ್ಣಪ್ಪ ಮೂಲ್ಯ ನಾವೂರು, ರಮೇಶ್ ಕೆಂಗಾಜೆ, ಪಳನಿ ಸ್ವಾಮಿ, ವಿನೋದ್ ಪ್ರಸಾದ್ ಕಲ್ಲಾಜೆ, ಶ್ರೀಧರ ಮುಗೇರ ನೇತ್ರಾವತಿ ನಗರ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಜಯ ಹೊಡಿಕ್ಕಾರು, ನವೀನ್ ಜೈನ್, ಗಂಗಯ್ಯ ಮುಗೇರ ದೇವನಾರಿ, ರಾಘವೇಂದ್ರ ಗುಡಿಗಾರ್, ಶ್ರೀಕಾಂತ್ ಎಸ್ ಇಂದಬೆಟ್ಟು, ನಿತೇಶ್ ಕಡಿತ್ಯಾರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಸೆಪ್ಟೆಂಬರ್ 1 ರಂದು ದೇವನಾರಿಯಲ್ಲಿ ಕೆಸರು ಗದ್ದೆ ಕ್ರಿಡಾ ಕೂಟ ಹಾಗೂ ಸೆಪ್ಟೆಂಬರ್ 7 ಮತ್ತು 8 ರಂದು ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ.

Related posts

ಶ್ರೀ ಕೃಷ್ಣ ಕುಂಬಾರರ ಗೆಳೆಯರ ಬಳಗ, ಚಾರ್ಮಾಡಿ ವಲಯ : ಸ್ವ ಜಾತಿ ಬಾಂಧವರ ಮಾಗಣೆ ಮಟ್ಟದ ಹೊನಲು ಬೆಳಕಿನ ಹಗ್ಗಜಗ್ಗಾಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಪವರ್ ಆನ್ ಸಂಸ್ಥೆಯಲ್ಲಿ ಶ್ರೀ ಲಕ್ಷ್ಮಿ ಪೂಜೆ ಕೂಪನ್ ಬಿಡುಗಡೆ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ಪ್ರತಿ ವರ್ಷದಂತೆ ದೀಪಾವಳಿಯ ನರಕ ಚತುರ್ದಶಿಯಂದು ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Suddi Udaya

ಬಿ.ಎಸ್.ಎಫ್ ನಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಲಾಯಿಲದ ಗಣೇಶ್ ಬಿ.ಎಲ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ಆ.16: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಓಡಿಲ್ನಾಳ ಹಾಗೂ ಕುವೆಟ್ಟು ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ

Suddi Udaya
error: Content is protected !!