ನಾಳ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya


ಬೆಳ್ತಂಗಡಿ : ನಾಳ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆ.23ರಂದು ಜರುಗಿತು.
ಸ್ವಚ್ಚ ಮನಸ್ಸು ಮತ್ತು ಸ್ವಚ್ಛ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ.ಪ್ರತಿಯೊಂದು ಮನೆಯಲ್ಲಿ ಧಾರ್ಮಿಕ ಪ್ರಜ್ಞೆ ಬೇಕು.ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ತಂದೆ, ತಾಯಿ,ಪೋಷಕರಲ್ಲಿದೆ. ನಮ್ಮ ಧಾರ್ಮಿಕ ಸಂಸ್ಕೃತಿಗಳ ಬಗ್ಗೆ ಬಾಲ್ಯದಲ್ಲೇ ಮಕ್ಕಳಿಗೆ ಮನೆಯಲ್ಲಿ ಜಾಗೃತಿಯ ಶಿಕ್ಷಣ ನೀಡುವ ಮೂಲಕ ಹೆಣ್ಣುಮಕ್ಕಳನ್ನು ಮಹಾಲಕ್ಷ್ಮೀಗಳಾಗಿಸಿ ಬೆಳೆಸಬೇಕು ಎಂದು ಧಾರ್ಮಿಕ ಉಪನ್ಯಾಸ ನೀಡಿದ ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜು ಉಪನ್ಯಾಸಕರಾದ ಶ್ರೀಮತಿ ಮೀನಾಕ್ಷಿ ಮಹಾಬಲ ಗೌಡ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು,ಜ್ಞಾನ ವಿಕಾಸ,ಸ್ವಸಹಾಯ ಸಂಘ ಒಕ್ಕೂಟ ನ್ಯಾಯತರ್ಪು- ಕಳಿಯ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಯು ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣಅವರ ಪೂಜಾ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಜರಗಿತು.ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ರಾಧಾಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿ ವಿಭಾಗದ ನಿರ್ದೇಶಕರಾದ ದುಗ್ಗೇ ಗೌಡ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್,ನಾಳ ದೇವಸ್ಥಾನದ ಆಡಳಿತಾಧಿಕಾರಿ ಶ್ರವಣ್ ಕುಮಾರ್, ಬೆಳ್ತಂಗಡಿ ಕೇಂದ್ರ ಪ್ರಗತಿ ಬಂಧು ಒಕ್ಕೂಟ ಅಧ್ಯಕ್ಷರಾದ ಸೀತಾರಾಮ ಎಂ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರಮಹಾಲಕ್ಷ್ಮೀ ಸಮಿತಿ ನಿಕಟ ಪೂರ್ವ ಅಧ್ಯಕ್ಷರಾದ ಸುಭಾಷಿಣಿ ಜನಾರ್ದನ ಗೌಡ ಕೆ, ಉಪಾಧ್ಯಕ್ಷರಾದ ಪುಷ್ಪ,ಕಾರ್ಯದರ್ಶಿ ಶಾಲಿನಿ ಸತೀಶ್,ಜತೆ ಕಾರ್ಯದರ್ಶಿ ಸಂಧ್ಯಾ ಸುರೇಶ್, ಕೋಶಾಧಿಕಾರಿ ಮಮತಾ ವಿ.ಆಳ್ವ,ನ್ಯಾಯತರ್ಪು ಸ್ವಸಹಾಯ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ ಹೆಚ್, ಸೇವಾ ಪ್ರತಿನಿಧಿ ಸೌಮ್ಯ ಶೆಟ್ಟಿ, ಸ್ವಸಹಾಯ ಪ್ರಗತಿ ಬಂಧು ಕಳಿಯ,ನ್ಯಾಯತರ್ಪು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು,ಭಜನಾ ಮಂಡಳಿ ಹಾಗೂ ವಿವಿಧ ಸಂಘ,ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದರು.
ಸನ್ಮಾನ:
ಪೂಜಾ ಸಮಿತಿ ವತಿಯಿಂದ ಅನ್ನದಾನ ಸೇವಾ ಕರ್ತರಾದ ವರಕಬೆ ಮನೆ ಶ್ರೀಮತಿ ಶಾರದ ಮತ್ತು ಕೃಷ್ಣಪ್ಪ ಪೂಜಾರಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.
ಬೆಳ್ತಂಗಡಿ ವಲಯ ಮೇಲ್ವಿಚಾರಕ ಹರೀಶ್ ಗೌಡ ಸ್ವಾಗತಿಸಿದರು. ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಕೇಲ್ದಡ್ಕ ಧನ್ಯವಾದವಿತ್ತರು.

Leave a Comment

error: Content is protected !!