24 C
ಪುತ್ತೂರು, ಬೆಳ್ತಂಗಡಿ
April 3, 2025
Uncategorizedಪ್ರಮುಖ ಸುದ್ದಿಬೆಳ್ತಂಗಡಿ

ಹೊಸಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಶ್ರೀ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ಬೆಳ್ತಂಗಡಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಗುರುವಾಯನಕೆರೆ, ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಹೊಸಂಗಡಿ-ಕರಿಮಣೇಲು, ಪ್ರಗತಿ ಬಂಧು ಸ್ವಸಹಾಯ ಜ್ಞಾನ ವಿಕಾಸ ಸಂಘಗಳ ಒಕ್ಕೂಟ ಹೊಸಂಗಡಿ ಇದರ ವತಿಯಿಂದ ನಡೆಯುತ್ತಿರುವ 21 ವರುಷದ ಶ್ರೀ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ಆ.23ರಂದು ಪೆರಿಂಜೆ ಸಂತೃಪ್ತಿ ಸಭಾಭವನದಲ್ಲಿ ಜರುಗಿತು.

ಸಂಸಾರದಲ್ಲಿ ಸಂಸ್ಕಾರ ಮೌಲ್ಯದ ಬಗ್ಗೆ, ಹಾಗೂ ಮಕ್ಕಳಿಗೆ ಧರ್ಮ ಪಾಲನೆಯ ಬಗ್ಗೆ ಹೆತ್ತವರ ಜವಾಬ್ದಾರಿಯ ಬಗ್ಗೆ ಎಸ್.ಡಿ.ಎಮ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಮಹಾವೀರ ಜೈನ ಇಚಿಳಂಪಾಡಿ ಧಾರ್ಮಿಕ ಉಪನ್ಯಾಸ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುಖಾಂತರ ಹಲವಾರು ಸಾಮಾಜಿಕ ಕಾರ್ಯಕ್ರಮ ನಡೆಯುತ್ತಿದ್ದು ಗ್ರಾಮ ಗ್ರಾಮದ ಅಭಿವೃದ್ಧಿಗೆ ಪೂಜ್ಯರ ಕೊಡುಗೆ ಅಪಾರ ಎಂದು ಮಾನವ ಸಂಪನ್ಮೂಲ ವಿಭಾಗ ಕೇಂದ್ರ ಕಚೇರಿ ನಿರ್ದೇಶಕರಾದ ಸುರೇಶ್ ಮೊಯಿಲಿ ತಿಳಿಸಿದರು, ಹೊಸಂಗಡಿ ಗ್ರಾಮದಲ್ಲಿ ಕಳೆದ 40 ವರ್ಷದಿಂದ ಆಗಿರುವಂತಹ ಬದಲಾವಣೆಗೆ ಪೂಜ್ಯರ ಕೊಡುಗೆ ಅಪಾರ, ಅವರಿಗೆ ನಾವು ಯಾವಾಗಲೂ ಚಿರಋಣಿಯಾಗಿರಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಧರಣೇಂದ್ರ ಕುಮಾರ್ ತಿಳಿಸಿದರು.

ಸರ್ಕಾರದ ಮೂಲಕ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ಪೂಜ್ಯರು ತಾವೇ ಸ್ವತಹ ಪ್ರೀತಿಯಿಂದ ಗ್ರಾಮ ಗ್ರಾಮಗಳ ಅಭಿವೃದ್ಧಿಗೆ ಶ್ರಮ ವಹಿಸುತ್ತಿದ್ದಾರೆ ಎಂದು ಶಂಕರ್ ಭಟ್ ಬಾಲ್ಯ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಅನುವಂಶಿಯ ಆಡಳಿತದಾರರು ಶ್ರೀ ಕ್ಷೇತ್ರ ಪಡ್ಯರಾಬೆಟ್ಟು ಜಿವಂದರ್ ಕುಮಾರ್ ರವರು ವರಮಹಾಲಕ್ಷ್ಮಿ ಪೂಜೆಯ ಮಹತ್ವ ಹಾಗೂ ಅದರ ಆಚರಣೆಯ ಬಗ್ಗೆ ಶುಭ ಹಾರೈಸಿದರು .

ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ , ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ವಸಂತಿ ಉಪಸ್ಥಿತರಿದ್ದರು , ಸುಜ್ಞಾನಿಧಿ ಶಿಷ್ಯವೇತನ ಪಡೆಯುತ್ತಿರುವ ಎರಡು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಮಂಜುರಾತಿ ಪತ್ರ ವಿತರಿಸಲಾಯಿತು, ವಲಯ ಮೇಲ್ವಿಚಾರಕರಾದ ಶ್ರೀಮತಿ ವೀಣಾ ರವರು ಸ್ವಾಗತಿಸಿದರು. ಜಯಲಕ್ಷ್ಮಿ ವರದಿ ವಾಚಿಸಿದರು, ಹೊಸಂಗಡಿ ಸೇವಾ ಪ್ರತಿನಿಧಿಯರಾದ ಹರೀಶ್ ರವರು ವಂದಿಸಿದರು.

Related posts

ಕಳಿಯ ಬದಿನಡೆ ದೈವಗಳಿಗೆ ವಾರ್ಷಿಕ ನೇಮೋತ್ಸವ

Suddi Udaya

ಬೆಳಾಲು ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗಾಲಿ ಕುರ್ಚಿ ಹಸ್ತಾಂತರ

Suddi Udaya

ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ನಡೆಸಿದ ಶಿಕ್ಷಕಿ ಭಾರತಿ ನಿಧನ

Suddi Udaya

ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಕಾಲಿಟ್ಟ ವಿಕ್ರಮ್ ಲ್ಯಾಂಡರ್ : ಇತಿಹಾಸ ಸೃಷ್ಟಿಸಿದ ಭಾರತ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಸರ್ವಜ್ಞ ಜಯಂತಿ ಆಚರಣೆ:

Suddi Udaya
error: Content is protected !!