ಬೆಳ್ತಂಗಡಿ:ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಆ.26 ರಂದು ಬೆಳ್ತಂಗಡಿ ತಾಲೂಕು ಆಡಳಿತ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ವಹಿಸಿದ್ದರು. ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಉದ್ಘಾಟನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಹೊಸಂಗಡಿ ಇಂದಿರಾ ವಸತಿ ಶಾಲೆಯ ಶಿಕ್ಷಕರಾದ ವಿದ್ಯಾಲತಾ ಎಂ.ಕೆ.,ಗೊಲ್ಲ ಸಮಾಜ ಅಧ್ಯಕ್ಷರಾದ ಹೆಚ್ .ರತ್ನಾಕರ್ ರಾವ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಉಪತಹಸೀಲ್ದಾರ್ ರವಿಕುಮಾರ್ ನಾಡಗೀತೆ ಹಾಡಿದರು. ಗ್ರಾಮ ಕಾರಣಿಕ ಹೇಮಾ ಸ್ವಾಗತಿಸಿದರು, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಧನ್ಯವಾದವಿತ್ತರು.