ಬೆಳ್ತಂಗಡಿ : ಕೊಯ್ಯೂರು ಸಾರ್ವಜನಿಕ 37ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ಆ.26 ರಂದು ನಡೆಯಿತು. ಕೊಯ್ಯೂರು ದೇಂತ್ಯಾರು ವಿಷ್ಣುಮೂರ್ತಿ ಜಿರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ. ತಿಮ್ಮಯ್ಯ ಗೌಡ ದೀಪ ಬೆಳಗಿಸುವ ಮೂಲಕ ಕ್ರೀಡೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಸಾರ್ವಜನಿಕರಿಗೆ ವಿವಿಧ ಬಗ್ಗೆಯ ಆಟೋಟ ಸ್ಪರ್ಧೆ ಮಕ್ಕಳಿಗೆ ಮುದ್ದು ಕೃಷ್ಣ ವೇಷ ಸ್ಪರ್ಧೆಗಳನ್ನು ಏರ್ಪಡಿಸಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ದೇಜಪ್ಪ ಗೌಡ ಬೆಲ್ಡೆ,ಗೌರವಾಧ್ಯಕ್ಷ ವಿನಯ ಕುಮಾರ್ ಕೆ, ಉಪಾಧ್ಯಕ್ಷರಾದ ಹೇಮಂತ ಗೌಡ, ಯಶವಂತ ಗೌಡ, ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ, ನಾರಾಯಣ ನಾಯ್ಕ ಗೌರವ ಸಲಹೆಗಾರ ವಿಜಯ ಕುಮಾರ್ ಎಂ. ಹಾಗೂ ಪದಾಧಿಕಾರಿಗಳು.ಭಜನಾ ಮಂಡಳಿ ಪದಾಧಿಕಾರಿಗಳಾದ ಚಂದ್ರ ಶೇಖರ ಸಾಲಿಯನ್,ಭರತ್ ಡೆಂಬುಗ ಮತ್ತು ಸದಸ್ಯರು ಸಾರ್ವಜನಿಕರು ಭಾಗವಹಿಸಿದರು.