30.2 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಾಗತಿಕ ಸೀರೋ ಮಲಬಾರ್ ಧರ್ಮ ಸಂಸದ್ ಗೆ ಪಾಲಾದಲ್ಲಿ ಸಮಾಪ್ತಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ಭಾಗಿ

ಮಂಗಳೂರು :ಕೇರಳದ ಕೊಟ್ಟಯಂ ಜಿಲ್ಲೆಯ ಪಾಲ ಸೆಂಟ್ ಅಲ್ಫೋನ್ಸಿಯನ್ ಸೆಂಟರ್ ನಲ್ಲಿ ನಡೆದ ಜಾಗತಿಕ ಸೀರೋ ಮಲಬಾರ್ ಧರ್ಮ ಸಭೆಯ ಐದನೇ ಜಾಗತಿಕ ಧರ್ಮ ಸಂಸದ್ ನಲ್ಲಿ ಸೀರೋ ಮಲಬಾರ್ ಧರ್ಮ ಸಭೆಯ ಸುಮಾರು ಐದು ಭೂಖಂಡಗಳ ಹದಿನಾರು ದೇಶಗಳ ಮೂವತ್ತಾಯಿದು ಧರ್ಮ ಪ್ರಾಂತ್ಯಗಳ ಆಯ್ದ 348 ಮಂದಿ ಪ್ರತಿನಿಧಿಗಳ ಸಮ್ಮೇಳನವು ಆ.22 ರಿಂದ ಆ 25 ರ ವರೆಗೆ ಅತ್ಯಂತ ಯಶಸ್ವಿಯಾಗಿ ಜರಗಿತು.


ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರ ಮತ್ತು ಪಶು ಸಂಗೋಪನಾ ಸಚಿವ ಜೋರ್ಜ್ ಕುರಿಯನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬೆಳ್ತಂಗಡಿ ಧರ್ಮ ಪ್ರಾಂತ್ಯದಿಂದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ, ವಿಕಾರ್ ಜೆನೆರಲ್ ಅತಿ ವಂದನಿಯ ಫಾ. ಜೋಸ್ ವಲಿಯಪರಂಭಿಲ್, ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನಿಯ ಫಾ. ಶಾಜಿ ಮಾತ್ಯು ಕ್ಯಾಥೋಲಿಕ್ ಯೂನಿಯನ್ ನಿಕಟ ಪೂರ್ವ ಅಧ್ಯಕ್ಷರು ಧರ್ಮ ಪ್ರಾಂತಿಯ ಪಾಲನ ಸಮಿತಿಯ ಸದಸ್ಯರು ಹಿರಿಯ ವಕೀಲರು ಸೇವಿಯಾರ್ ಪಾಲೇಲಿ, ಧರ್ಮ ಪ್ರಾಂತ್ಯ ದ ಕೇಂದ್ರ ಪಾಲನ ಸಮಿತಿಯ ಸದಸ್ಯರು ಎ ಕೆ ಸಿ ಸಿ ಜಾಗತಿಕ ಕಾರ್ಯದರ್ಶಿಗಳಲ್ಲಿ ಓರ್ವ ರಾದ ಜೈಸನ್ ಪಟ್ಟೀರಿ, ಮಾತೃ ವೇದಿಕೆ ಧರ್ಮ ಪ್ರಾಂತಿಯ ಅಧ್ಯಕ್ಷೆ ಶ್ರೀಮತಿ ಮೆರ್ಸಿ ಚಾಕೋ ಬಜಗೋಳಿ, ಮಡಂತ್ಯಾರು ಕಾಲೇಜಿನ ಪ್ರಾದ್ಯಪಕ ಅಲ್ವಿನ್ ಕೊಚ್ಚು ಪುರಕಲ್ ವೇಣೂರು ಭಾಗವಹಿಸಿದರು.


ಕಾರ್ಯಕ್ರಮವು ಸೀರೋ ಮಲಬಾರ್ ಸಭೆಯ ಭವಿಷ್ಯದ ಮಾರ್ಗದರ್ಶನಕ್ಕಾಗಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲು ವೇದಿಕೆ ಒದಗಿಸಿತು, ಮತ್ತು ಪ್ರತಿನಿಧಿಗಳಿಂದ ಅತ್ಯಧಿಕ ಸಹಕಾರವನ್ನು ಪಡೆದಿತು.

Related posts

ಮಿತ್ತಬಾಗಿಲು ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಪದಗ್ರಹಣ ಸಮಾರಂಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕೃತೆ ಕನ್ನಾಜೆಯ ಸುರಕ್ಷಾ ಆಚಾರ್ಯರಿಗೆ ಸನ್ಮಾನ

Suddi Udaya

ಪೆರ್ಲ ಬೈಪಾಡಿ ಸ.ಪ್ರೌ. ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ: 13ನೇ ವರ್ಷದ ಪಾದಯಾತ್ರೆ ಸಂಪನ್ನ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಶೀಘ್ರದಲ್ಲೇ ನಸಿ೯ಂಗ್‌ ಕಾಲೇಜು ಹಾಗೂ ಕೃಷಿ ಕಾಲೇಜು ಆರಂಭಿಸಲು ಯೋಜನೆ: ಡಾ.ಹೆಗ್ಗಡೆ

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ, ಕಾರ್ಯದರ್ಶಿಯಾಗಿ ಗಣೇಶ್ ಶಿರ್ಲಾಲು, ಕೋಶಾಧಿಕಾರಿಯಾಗಿ ಪುಷ್ಪರಾಜ್ ಆಯ್ಕೆ

Suddi Udaya

ಉಜಿರೆ: ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಗುಡ್ಡ ಗಾಡು ಓಟ

Suddi Udaya
error: Content is protected !!