April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಿಗೆ ಕೊಯ್ಯೂರಿನ ಶ್ರೀ ಕೃಷ್ಣ ಭಜನಾ ಮಂಡಳಿಯಲ್ಲಿ ಅಭಿನಂದನೆ

ಕೊಯ್ಯೂರು : ಇಲ್ಲಿಯ ಶ್ರೀ ಕೃಷ್ಣ ಭಜನಾ ಮಂಡಳಿಯಲ್ಲಿ ಸದಸ್ಯರಾಗಿ ನಂತರ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಭಜನಾ ಮಂಡಳಿಯ ಗೌರವ ಸಲಹೆಗಾರರಾಗಿ ಊರಿನ ವಿವಿಧ ಸಂಘಟನೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ಲಾಯಿಲ ವಲಯದ ಭಜನಾ ಪರಿಷತ್ತಿನ ಸಂಯೋಜಕರಾಗಿ ಅಧ್ಯಕ್ಷರಾಗಿ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿಯಾಗಿ ತಾಲೂಕು ಕುಣಿತ ಭಜನೆಯ ತರಬೇತಿದಾರರುಗಳ ಸಂಘ ಸ್ಥಾಪನೆಯ ಕಾರಣಿಕರ್ತರಾಗಿ ಅದರ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಇದರ ರಾಜ್ಯಾಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಪಿ ಚಂದ್ರಶೇಖರ ಸಾಲ್ಯಾನ್ ಇವರಿಗೆ ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಲ್ ಕೊಯ್ಯೂರು ಇದರ ವತಿಯಿಂದ ಅಭಿನಂದನ ಕಾರ್ಯಕ್ರಮ ನಡೆಯಿತು.


ಈ ಸಂದರ್ಭ ಭಜನಾ ಮಂಡಳಿಯ ಅಧ್ಯಕ್ಷ ರೋಹಿತಾಕ್ಷ ಉಮಿಯ ದರ್ಕಾಸು, ಕಾರ್ಯದರ್ಶಿ ಓಬಯ್ಯ ನಾಯ್ಕ, ಗೌರವಾಧ್ಯಕ್ಷರಾದ ವಿಶ್ವನಾಥ ಗೌಡ ಬಚ್ಚಿರೆದಡಿ, ಊರಿನ ಪ್ರಗತಿಪರ ಕೃಷಿಕರು ಹಿರಿಯರು ಭಜನಾ ಮಂಡಳಿಯ ಗೌರವ ಸಲಹೆಗಾರರಾದ ಪ್ರಚಂಡಬಾನು ಭಟ್ ಪಾಂಬೆಲು, ಸಲಹೆಗಾರರುಗಳಾದ ಶೇಖರ ಗೌಡ ಕೋರಿಯಾರು, ಕುಶಾಲಪ್ಪ ನಾಯ್ಕ ಕುಕ್ಕುದಡಿ, ಉಪಾಧ್ಯಕ್ಷರುಗಳಾದ ಸುಂದರ ಗೌಡ ಕಜೆಕೋಡಿ, ರಮೇಶ್ ಗೌಡ ಮಾವಿನಕಟ್ಟೆ, ಜೊತೆ ಕಾರ್ಯದರ್ಶಿಗಳಾದ ಅಶೋಕ ಪೂಜಾರಿ ಕುಂಇಿಮೇರು, ಜಿತೇಶ್ ಪೂಜಾರಿ ಸಾಂತ್ಯೋಡಿ, ಲೆಕ್ಕ ಪರಿಶೋಧಕರುಗಳಾದ ಲಿಂಗಪ್ಪ ಗೌಡ ಬೆರ್ಕೆ, ಹೇಮಂತಗೌಡ ದೆಂತ್ಯಾರು ಬೊಟ್ಟು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ದೇಜಪ್ಪಗೌಡ ಬೆಲ್ದೆ, ಮಹಿಳಾ ಭಜನಾ ತಂಡದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಹೇಮಂತ ಗೌಡ ಜಂಕಿನಡ್ಕ, ಗೌರವಾಧ್ಯಕ್ಷೆಯಾದ ಶ್ರೀಮತಿ ಮಾಲಿನಿ ಧನಂಜಯ ಆಚಾರ್ಯ ಕೋಡಿಯಲು, ಜೊತೆ ಕಾರ್ಯದರ್ಶಿಯಾದ ಶ್ರೀಮತಿ ಹರಿನಾಕ್ಷಿ ಆದೂರು ಪೆರಾಲ್, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಅಶ್ವಿನಿ ಕಾಂತಪ್ಪ ಗೌಡ ಬರೆಮೇಲು, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ವಿನಯ್ ಕೆ, ಉಪಾಧ್ಯಕ್ಷ ಯಶವಂತ ಗೌಡ ಪುರ್ಯಳ, ಕಾರ್ಯದರ್ಶಿ ಮನೋಜ್ ಕಜೆ, ಜೊತೆ ಕಾರ್ಯದರ್ಶಿ ದಿನೇಶ್ ಜಾನ್ಲಾಪು, ಕೋಶಾಧಿಕಾರಿ ಗೀತಾ ರಾಮಣ್ಣಗೌಡ ಕೋಡಿಯೆಲು, ಕ್ರೀಡಾ ಸಮಿತಿಯ ಸಂಚಾಲಕರಾದ ದಾಮೋದರ ಗೌಡ ಬೆರ್ಕೆ ಹರ್ಷ ಗೆಳೆಯರ ಬಳಗದ ಅಧ್ಯಕ್ಷ ರಾಮಣ್ಣ ಗೌಡ ಕುಂಞಮೇರು, ಕಾರ್ಯದರ್ಶಿಯಾದ ಭರತ್ ದೆಂಬುಗ ಮತ್ತು ಭಜನಾ ಮಂಡಳಿಗಳ ಎಲ್ಲಾ ಸದಸ್ಯರುಗಳು ಹಾಗೂ ಊರವರು ಪಾಲ್ಗೊಂಡಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಸದ ಬಿ.ವೈ . ರಾಘವೇಂದ್ರ ಭೇಟಿ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಕಾರ್ಯಾಲಯ ಉದ್ಘಾಟನೆ

Suddi Udaya

ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ: ಕಾಪಿನಡ್ಕ ಸ ಕಿ ಪ್ರಾ ಶಾಲೆಗೆ ಕಂಪ್ಯೂಟರ್ ಉಪಕರಣಗಳ ಹಸ್ತಾಂತರ

Suddi Udaya

ನಾರಾವಿ ಅರಸಕಟ್ಟೆ ಶ್ರೀ ಸೂರ್ಯ ಪ್ರೆಂಡ್ಸ್ ಮಂಚಕಲ್ಲು ನೂತನ ಸಮಿತಿ ರಚನೆ

Suddi Udaya

ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ

Suddi Udaya

ಆ.29 ರಿಂದ ಸೆ.2ರ ವರೆಗೆ ಪಾಸ್​ಪೋರ್ಟ್ ಸೇವಾ ಪೋರ್ಟಲ್ ಬಂದ್

Suddi Udaya
error: Content is protected !!