September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

ಧರ್ಮಸ್ಥಳ : ಧರ್ಮಸ್ಥಳ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ವಿಮಲ ರವರ ಅಧ್ಯಕ್ಷತೆಯಲ್ಲಿ ಆ.29 ರಂದು ಧರ್ಮಸ್ಥಳ ಗ್ರಾ.ಪಂ. ಸಭಾಭವನದಲ್ಲಿ ಜರುಗಿತು.

ಮಾರ್ಗದರ್ಶಕ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್ ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.

ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ. ಉಪಾಧ್ಯಕ್ಷ ಪಿ ಶ್ರೀನಿವಾಸ್ ರಾವ್, ಕಾರ್ಯದರ್ಶಿ ದಿನೇಶ್, ಪಂಚಾಯತ್‌ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು , ಶಾಲಾ ಮುಖ್ಯೋಪಾಧ್ಯಾಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ. ಸ್ವಾಗತಿಸಿ, ಲೆಕ್ಕ ಸಹಾಯಕಿ ಪ್ರಮೀಳಾ ಜಮಾ ಖರ್ಚು ವಿವರಿಸಿದರು. ಗ್ರಾ.ಪಂ. ಸಿಬ್ಬಂದಿ ದೇವಿಪ್ರಸಾದ್ ಬೊಳ್ಮ ವರದಿ ವಾಚಿಸಿದರು.

Related posts

ಬಂದಾರು: ಶ್ರೀಧರ ಪೂಜಾರಿಯವರ ಮನೆಯ ಹಿಂಬದಿಯ ಗುಡ್ಡ ಕುಸಿತ

Suddi Udaya

ಹರೀಶ್ ಪೂಂಜ ಗೆಲುವು: ಬಂದಾರು ಗ್ರಾಮದ ಬೈಪಾಡಿ,ಮೈರೋಳ್ತಡ್ಕ, ಪಾಣೆಕಲ್ಲು ವಾರ್ಡ್ ಗಳಲ್ಲಿ ಸಂಭ್ರಮಾಚರಣೆ

Suddi Udaya

ಭೀಕರ ಮಳೆಗೆ ರೆಖ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿಯ ಗುಡ್ಡ ಕುಸಿತ: ಗರ್ಭಗುಡಿ , ಸುತ್ತು ಪೌಳಿಗೆ ಹಾನಿ

Suddi Udaya

ಉಜಿರೆ: ಶ್ರೀ. ಧ.ಮಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ಕಾನೂನು ಮಾಹಿತಿ ಶಿಬಿರ

Suddi Udaya

ಬಳಂಜ: ಸನಾತನ ಸಂಸ್ಥೆಯಿಂದ ವಿಶೇಷ ಪ್ರವಚನ

Suddi Udaya

ಮರೋಡಿ 25 ಕೆವಿ ಸಾಮರ್ಥ್ಯದ ಪರಿವರ್ತಕ ಧರಾಶಾಯಿ: ಗಾಳಿ ಮಳೆ ಮೆಸ್ಕಾಂಗೆ 5 ಲಕ್ಷ ರೂ. ನಷ್ಟ

Suddi Udaya
error: Content is protected !!