ಬೆಳ್ತಂಗಡಿ : ಲಾಯಿಲ ಗ್ರಾಮದ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕುಂಟಿನಿ ಬ್ರಾಂಚ್ ಸಮಿತಿ ವತಿಯಿಂದ ಹಳೆಪೇಟೆ ವ್ಯಾಪ್ತಿಯಲ್ಲಿ ನ್ಯಾಯ ಬೆಲೆ ಅಂಗಡಿಯ ಕುರಿತಾಗಿ ಬೆಳ್ತಂಗಡಿ ಆಹಾರ ನಿರೀಕ್ಷಕರಿಗೆ ಮನವಿಯನ್ನು ನೀಡಲಾಯಿತು.
ಲಾಯಿಲ ಗ್ರಾಮದ ಹಳೆಪೇಟೆ ಎಂಬಲ್ಲಿ ಸುಮಾರು ವರ್ಷಗಳಿಂದ ನ್ಯಾಯ ಬೆಲೆ ಅಂಗಡಿಯ ಕೊರತೆ ಇದ್ದು, ಇದರಿಂದಾಗಿ ನ್ಯಾಯ ಬೆಲೆ ಅಂಗಡಿಗಾಗಿ ಪ್ರಸಕ್ತ ಉಜಿರೆಯಲ್ಲಿರುವ ನ್ಯಾಯ ಬೆಲೆ ಅಂಗಡಿಯನ್ನು ಅವಲಂಬಿಸಬೇಕಾದ ಅನಿವಾರ್ಯ ಇದ್ದು,ಇಲ್ಲಿ ಟೋಕನ್ ಪಡೆದು ಎರಡು ಗ್ರಾಮದ ಎಲ್ಲಾ ಕಾರ್ಡ್ ದಾರರು ಕಾದು ನಿಂತುಕೊಂಡು ಹೋಗುವ ಪರಿಸ್ಥಿತಿ ಇದೆ. ಅದಲ್ಲದೆ ಸುಡು ಬಿಸಿಲಿನಲ್ಲಿ ವಯಸ್ಕರು ಹಾಗು ಸ್ತ್ರೀಯರು ಕಾದು ನಿಂತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕೆಲವು ದಿನಗಳ ಮುಂಚಿತವಾಗಿ ಒಂದು ವಯಸ್ಸಾದ ಸ್ತ್ರೀ ಬಿಸಿಲಿನ ತಾಪಕ್ಕೆ ತಲೆ ತಿರುಗಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಘಟನೆಯು ನಡೆದಿದೆ. ಉಜಿರೆಯ ನ್ಯಾಯ ಬೆಲೆ ಅಂಗಡಿಯಲ್ಲಿ ಒಂದೇ ಕಂಪ್ಯೂಟರ್ ಹಾಗೂ ಸಿಬ್ಬಂದಿ ಇದ್ದು ಸಮಯ ಹಾಗೂ ಸರ್ವರ್ ಸಮಸ್ಯೆ ಎಂದು ಹೇಳುತ್ತಾರೆ.
ಈ ಎಲ್ಲಾ ವಿಷಯಗಳನ್ನು ಮನಗಂಡು ಲಾಯಿಲ ಗ್ರಾಮದ ಹಳೆಪೇಟೆ ವ್ಯಾಪ್ತಿಯಲ್ಲಿ ನ್ಯಾಯ ಬೆಲೆ ಅಂಗಡಿಯನ್ನು ಈಡೇರಿಸುವಂತೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್. ಡಿ. ಪಿ. ಐ ಕುಂಟಿನಿ ಬ್ರಾಂಚ್ ಅಧ್ಯಕ್ಷರು ಆಸೀರ್ ಕುಂಟಿನಿ, ಉಜಿರೆ ಬ್ಲಾಕ್ ಅಧ್ಯಕ್ಷರು ಮೊಹಮ್ಮದ್ ಆಲಿ ಹಾಗೂ ಸಹಲ್ ನೀರ್ಸಾಲ್, ಫಾಝಿಲ್ ಹಾಗೂ ತಂಝಿಲ್ ಉಪಸ್ಥಿತರಿದ್ದರು.