30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 42 ಲಕ್ಷ ಲಾಭ, 110 ಕೋಟಿ ವ್ಯವಹಾರ, ಶೇ.10 ಡಿವಿಡೆಂಟ್

ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಆ.31ರಂದು ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು.


2019ರಲ್ಲಿ ಆರಂಭವಾದ ದಿನದಿಂದ ಸತತವಾಗಿ ಅಭಿವೃದ್ಧಿ ಪಥದಲ್ಲಿದ್ದು ಪ್ರಸಕ್ತ ಸಾಲಿನಲ್ಲಿ 42 ಲಕ್ಷ ರೂ. ಲಾಭಗಳಿಸಿದೆ. ಉಜಿರೆಯಲ್ಲಿ ಸಂಘವು ಹೊಂದಿರುವ 15 ಕೋ. ರೂ. ಮೌಲ್ಯದ ಆಸ್ತಿಯಲ್ಲಿ 10 ಕೋ.ರೂ. ವೆಚ್ಚದ ಸುಸಜ್ಜಿತ ಸಭಾಭವನ ನಿರ್ಮಾಣ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.10 ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಘೋಷಣೆ ಮಾಡಲಾಯಿತು.

ಪ್ರತಿಭಾ ಪುರಸ್ಕಾರ: ಪಿಯುಸಿಯಲ್ಲಿ ಶೇ.90 ಅಂಕಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಕೆ.ಎಸ್.ಹಿಮಕರ ಗೌಡ ಕೂಡಿಗೆ, ಕವನಾ ಚಾರ್ಮಾಡಿ, ಪ್ರಜ್ವಲ್ ಅರಳಿ, ಎಸೆಸೆಲ್ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಹರ್ಷ ಎಂ.ಎಚ್. ಮರಕಡ, ಗೌತಮಿ ಡಿ. ಬಡೆಕೊಟ್ಟು, ಸಂಜನಾ ಗಾಂಜಾಲು ಅವರನ್ನು ಗೌರವಿಸಲಾಯಿತು.


ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಮಾತನಾಡಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜಿ ವರದಿ ವಾಚಿಸಿದರು.


ಉಪಾಧ್ಯಕ್ಷ ಶಿವಕಾಂತ ಗೌಡ, ನಿರ್ದೇಶಕರಾದ ಎನ್.ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ದಾಮೋದರ ಗೌಡ ಸುರುಳಿ, ಕೆ.ಜಯಂತ ಗೌಡ ಗುರಿಪಳ್ಳ, ಸುಂದರ ಗೌಡ ಪುಡ್ಕತ್ತು, ಬಿ.ಕೃಷ್ಣಪ್ಪ ಗೌಡ ಬೇಂಗಳ, ಜಯಂತ ಗೌಡ ಓಣಿಯಾಲು, ಭರತ್ ಕುಮಾರ್ ಗೌಡ ಹಾನಿಬೆಟ್ಟು, ಕೆ.ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ, ಚೇತನಾ ಉಪಸ್ಥಿತರಿದ್ದರು.


ಚೇತನಾ ಚಂದ್ರಶೇಖರ್ ಪ್ರಾರ್ಥನೆ ಹಾಡಿದರು.ನಿರ್ದೇಶಕರಾದ ಧರ್ಮರಾಜ ಗೌಡ ಅಡ್ಯಾಡಿ ವಂದಿಸಿದರು. ನಿತಿನ್ ಗೌಡ ಸುರುಳಿ ನಿರೂಪಿಸಿದರು.

Related posts

ಮಾಜಿ ಶಾಸಕರಾದ ಕೀರ್ತಿಶೇಷ ಕೆ. ವಸಂತ ಬಂಗೇರರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

Suddi Udaya

ದೆಹಲಿಯಲ್ಲಿ ನಿರ್ಮಾಣಗೊಳ್ಳಲಿರುವ ಯೋಧರ ಉದ್ಯಾನವನಕ್ಕೆ ಬೆಳ್ತಂಗಡಿಯಿಂದ ಮಣ್ಣು ಸಮರ್ಪಣೆ

Suddi Udaya

ಬೆಳ್ತಂಗಡಿಯಲ್ಲಿ ಬಿಸಿಲ ಬೇಗೆಗೆ ತಂಪು ಮಜ್ಜಿಗೆ ಹಂಚಿ ಬಾಯಾರಿಕೆ ತಣಿಸಿದ ‘ರೆಡ್ ಕ್ರಾಸ್’ ತಂಡ

Suddi Udaya

ವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya

ಶ್ರೀ ರಾಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಲಾಯಿಲ ಕಕ್ಕೇನಾದ ಯುವಕ ಭರತ್ ಕುಮಾರ್ ನಾಪತ್ತೆ: ಪೈಂಟಿಂಗ್ ಕೆಲಸ ಮಾಡುತ್ತಿದ್ದ ಯುವಕ : ಪತ್ತೆಗಾಗಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು

Suddi Udaya
error: Content is protected !!