ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆ.1ರಂದು ಪದ್ಮುಂಜ ಸಹಕಾರಿ ಸಂಘದ ರೈತ ಸಭಾ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣಿಕ್ಕರ ವಹಿಸಿದ್ದರು. ಈ ಸಾಲಿನ ವಾರ್ಷಿಕ ವ್ಯವಹಾರ 360.99 ಕೋಟಿ ನಡೆದಿದ್ದು ರೂ. 1.81 ಕೋಟಿ ಲಾಭ ಗಳಿಸಿದೆ ಸದಸ್ಯರಿಗೆ ಶೇ.13 ಡಿವಿಡೆಂಟ್ ನೀಡಲಾಯಿತು.
ಶೇಕಡಾ 100 ಫಲಿತಾಂಶ ಪಡೆದ ಶಾಲೆಯಾದ ಬೈಪಾಡಿ. ಮೋಗ್ರು. ಬುಳೆರಿ.ಸರಕಾರಿ ಪ್ರೌಢಶಾಲೆ.ಸರಕಾರಿ ಪದವಿ ಪೂರ್ವ ಕಾಲೇಜು ಪದ್ಮುಂಜ ಇದರ ಎಲ್ಲಾ ಮುಖ್ಯೋಪಾಧ್ಯಾಯರಿಗೆ ಮತ್ತು ಅಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು.
ಸಾಧಕರಿಗೆ ಸನ್ಮಾನ : ಕುಶಾಲಪ್ಪ ಗೌಡ ಪೂವಾಜೆ. ದೇವಿಪ್ರಸಾದ್ ಕಡಮ್ಮಾಜೆ. ಸಂದೀಪ್. ಕುಶಾಲಪ್ಪ ಗೌಡ ಮುಗೇರಡ್ಕ. ಗಣೇಶ್. ಕೆ. ಚಂದ್ರಹಾಸ. ತೇಜಸ್ಸಿನಿ. ಕುಸುಮ ಮುಂತಾದವರನ್ನು ಸನ್ಮಾನ ಮಾಡಲಾಯಿತು.
ದ. ಕ. ಜಿಲ್ಲಾ SCDCC ಬ್ಯಾಂಕ್ ನ ನಿರ್ದೇಶಕರಾದ ಕುಶಾಲಪ್ಪ ಗೌಡ, ಉಪಾಧ್ಯಕ್ಷ ಅಶೋಕ,. ನಿರ್ದೇಶಕರಗಳಾದ ರಾಜೀವ್ ರೈ, ಉದಯ ಭಟ್, ಉದಯ ಬಿ.ಕೆ., ನಾರಾಯಣ ಗೌಡ, ರಾಮಣ್ಣ ಮಡಿವಾಳ, ಪಿಜಿನಾ ಮುಗೇರ, ಶೀಲಾವತಿ, ವಿನಯಶ್ರೀ, ದಿನೇಶ್ ನಾಯ್ಕ, ಕೇಶವ, ಡಿಸಿಸಿ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಂಕಿತ ವರದಿ ವಾಚಿಸಿದರು.