April 2, 2025
ನಿಧನ

ಬಳಂಜ:ಅಟ್ಲಾಜೆ ಅಂಗನವಾಡಿ ಶಿಕ್ಷಕಿ ಜಾನಕಿ ಹೃದಯಾಘಾತದಿಂದ ನಿಧನ

ಬಳಂಜ:ಅಟ್ಲಾಜೆ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಜಾನಕಿ(50)ವರ್ಷ ಇಂದು ಸಂಜೆ ಆಗಸ್ಟ್ 31 ರಂದು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜಾನಕಿಯವರು ಹಲವು ವರ್ಷಗಳಿಂದ ಬಳಂಜ ಗ್ರಾಮದ ಅಟ್ಲಾಜೆ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಪುಟಾಣಿ ಮಕ್ಕಳ ಅಪಾರ ಪ್ರೀತಿಗೆ ಪಾತ್ರರಾಗಿದ್ದರು. ಊರಿನ ಜನರೊಂದಿಗೂ ಉತ್ತಮ ಸ್ನೇಹ,ಪ್ರೀತಿ ಮತ್ತು ಅನೋನ್ಯತೆಯನ್ನು ಹೊಂದಿದ್ದ ಜಾನಕಿಯವರು ಕೆಲವು ದಿನಗಳಿಂದ ಸುಸ್ತು ಮತ್ತು ಜ್ವರದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು ಇಂದು ಮಧ್ಯಾಹ್ನ ಬಳಂಜದ ತನ್ನ ಮನೆಯಿಂದ ಬಂಟ್ವಾಳದಲ್ಲಿರುವ ತಾಯಿ ಮನೆಗೆ ತೆರಳಿದ್ದ ಸಂದರ್ಭ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತಿ ಸಂಜೀವ,ಓರ್ವ ಪುತ್ರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಅಳದಂಗಡಿ: ಕೆದ್ದು ನಿವಾಸಿ ಸತೀಶ್ ಪೂಜಾರಿ ನಿಧನ

Suddi Udaya

ಭಾರತೀಯ ಸೇನೆಯಲ್ಲಿ ಸುಮಾರು 29 ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಸೈನಿಕ ಕುಕ್ಕೇಡಿಯ ಚಂದ್ರಹಾಸ ಪೂಜಾರಿ ನಿಧನ: ತಿಂಗಳ ಅಂತರದಲ್ಲಿ ‌ ಪತಿ -ಪತ್ನಿ ಸಾವು

Suddi Udaya

ಪಟ್ರಮೆ: ಕೂಡಿಗೆ ಸೇತುವೆ ಅಡಿಯಲ್ಲಿ ಯುವಕನ ಶವ ಪತ್ತೆ

Suddi Udaya

ಮಚ್ಚಿನ: ಕೃಷಿಕ ಗಂಗಯ್ಯ ಮೂಲ್ಯ ನಿಧನ

Suddi Udaya

ಧರ್ಮಸ್ಥಳ ದೊಂಡೋಲೆ ನಿವಾಸಿ ಸಂತೋಷ್ ಶೆಟ್ಟಿ ನಿಧನ

Suddi Udaya

ಕತಾರ್ ನಿಂದ‌‌ ಊರಿಗೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

Suddi Udaya
error: Content is protected !!