ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸ್ವಯಂ ಸೇವಕರಿಗೆ ಪೋಸ್ಟರ್ ತಯಾರಿಕಾ ಹಾಗೂ ಶುಭಾಶಯ ಪತ್ರಗಳ ತಯಾರಿಕಾ ಕಾರ್ಯಾಗಾರ ನಡೆಯಿತು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾ. ಸೇ. ಯೋಜನೆಯ ಸ್ವಯಂ ಸೇವಕರಾದ ತ್ರಿಶೂಲ್ ಹಾಗೂ ಸ್ವರ್ಣಾ ಅವರು ವಿವಿಧ ರೀತಿಯ ಪೋಸ್ಟರ್ ತಯಾರಿಕೆ ಹಾಗೂ ಶುಭಾಶಯ ಪತ್ರಗಳ ರಚನೆಯ ಬಗ್ಗೆ ತರಬೇತಿ ನೀಡಿದರು. ವರುಣ್ ಹಾಗೂ ಚೇತನ್ ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಸ್ವಯಂ ಸೇವಕ , ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಪ್ರಾಧ್ಯಾಪಕ ಡಾ.ರಕ್ಷಿತ್ ಅಪರಾ ಶುಭಕೋರಿದರು. ನಿಕಟಪೂರ್ವ ಯೋಜನಾಧಿಕಾರಿ ರಾಜು.ಎ ಅವರು ಉಪಸ್ಥಿತರಿದ್ದರು.
ರಾ. ಸೇ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ನಿರೂಪಿಸಿದರು. ಧನುಶ್ರೀ ಸ್ವಾಗತಿಸಿ , ಶ್ರಮಾ ವಂದಿಸಿದರು.