ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಪೋಸ್ಟರ್ ತಯಾರಿಕಾ ಕಾರ್ಯಾಗಾರ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸ್ವಯಂ ಸೇವಕರಿಗೆ ಪೋಸ್ಟರ್ ತಯಾರಿಕಾ ಹಾಗೂ ಶುಭಾಶಯ ಪತ್ರಗಳ ತಯಾರಿಕಾ ಕಾರ್ಯಾಗಾರ ನಡೆಯಿತು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾ. ಸೇ. ಯೋಜನೆಯ ಸ್ವಯಂ ಸೇವಕರಾದ ತ್ರಿಶೂಲ್ ಹಾಗೂ ಸ್ವರ್ಣಾ ಅವರು ವಿವಿಧ ರೀತಿಯ ಪೋಸ್ಟರ್ ತಯಾರಿಕೆ ಹಾಗೂ ಶುಭಾಶಯ ಪತ್ರಗಳ ರಚನೆಯ ಬಗ್ಗೆ ತರಬೇತಿ ನೀಡಿದರು. ವರುಣ್ ಹಾಗೂ ಚೇತನ್ ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಸ್ವಯಂ ಸೇವಕ , ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಪ್ರಾಧ್ಯಾಪಕ ಡಾ.ರಕ್ಷಿತ್ ಅಪರಾ ಶುಭಕೋರಿದರು. ನಿಕಟಪೂರ್ವ ಯೋಜನಾಧಿಕಾರಿ ರಾಜು.ಎ ಅವರು ಉಪಸ್ಥಿತರಿದ್ದರು.

ರಾ. ಸೇ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ನಿರೂಪಿಸಿದರು. ಧನುಶ್ರೀ ಸ್ವಾಗತಿಸಿ , ಶ್ರಮಾ ವಂದಿಸಿದರು.

Related posts

ಕಳೆದ 18 ವರ್ಷಗಳಿಂದ ಪಡಂಗಡಿ ಪ್ರಾ.ಕೃ.ಪ.ಸ. ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಕೇಶಿನಿ ಎ ಅವರಿಗೆ ಕಾಯಕ ದೀಕ್ಷಾಮಣಿ ಪ್ರಶಸ್ತಿ ಪ್ರದಾನ

Suddi Udaya

ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವತಿಯಿಂದ ಖ್ಯಾತ ಮೂತ್ರರೋಗ ತಜ್ಞ ಡಾ| ಸದಾನಂದ ಪೂಜಾರಿರವರಿಗೆ ಆರೋಗ್ಯ ಸೇವಾ ಶ್ರೇಷ್ಠತೆ ಪ್ರಶಸ್ತಿ

Suddi Udaya

ಬೆಳಾಲು ಪ್ಯಾಕ್ಸ್: ಆರ್ಥಿಕ ಅವ್ಯವಹಾರ ಪ್ರಕರಣಎರಡನೇ ಆರೋಪಿ ಪ್ರಶಾಂತ್ ಬಂಧನ

Suddi Udaya

ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಗೆ ಪೆನ್ನು ವಿತರಣೆ

Suddi Udaya

ಧರ್ಮಸ್ಥಳ : ನೇತ್ರಾವತಿ ಸ್ನಾನಘಟ್ಟ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ

Suddi Udaya
error: Content is protected !!