25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಲ್ಕೂರು: ಸಮಾಜ ಸೇವಕ ಹೆಚ್. ಧರ್ಣಪ್ಪ ಪೂಜಾರಿಯವರಿಗೆ ಯುವಶಕ್ತಿ ಫ್ರೆಂಡ್ಸ್ ನಿಂದ ಸನ್ಮಾನ

ಬಳಂಜ: ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ವತಿಯಿಂದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷ, ಮಾಜಿ ತಾ.ಪಂ ಸದಸ್ಯ, ಹಿರಿಯರು, ಸಮಾಜ ಸೇವಕರಾದ ಹೆಚ್. ಧರ್ಣಪ್ಪ ಪೂಜಾರಿಯವರನ್ನು ಸಮಾಜಕ್ಕೆ ಸಲ್ಲಿಸಿದ ಪ್ರಾಮಾಣಿಕ ಸೇವೆಗಾಗಿ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.

ಹೆಚ್. ಧರ್ಣಪ್ಪ ಪೂಜಾರಿಯವರು ಸನ್ಮಾನ ಸ್ವೀಕರಿಸಿ ಮಾತನಾಡಿ ಬದುಕಿನಲ್ಲಿ ಯಾವತ್ತಿಗೂ ನಾವು ಇನ್ನೊಬ್ಬರಿಗೆ ಸಹಾಯ ಮಾಡಬೇಕೆ ವಿನಃ ಕೆಟ್ಟದ್ದನ್ನು ಬಯಕಬಾರದು. ನಾವು ಮಾಡುವ ಒಳ್ಳೆಯ ಕೆಲಸಕ್ಕೆ ದೇವರ ಆಶೀರ್ವಾದ ಸದಾ ಇರುತ್ತದೆ. ಯುವಶಕ್ತಿ ಫ್ರೆಂಡ್ಸ್ ತಂಡ ಸಮಾಜಮುಖಿಯಾಗಿ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಸಂತೋಷ್ ಕುಮಾರ್ ಕಾಪಿನಡ್ಕ,ತಿಮ್ಮಪ್ಪ ಪೂಜಾರಿ ತಾರಿಪಡ್ಪು, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ಹೆಚ್. ದೇಜಪ್ಪ ಪೂಜಾರಿ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ನಿಕಟಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್ ಹೆಚ್‌.ಎಸ್, ಯುವಶಕ್ತಿ ಫ್ರೆಂಡ್ಸ್ ತಂಡದ ಸಂತೋಷ್ ಪಿ ಕೋಟ್ಯಾನ್, ವಿಜಯ ಪೂಜಾರಿ, ಕರುಣಾಕರ ಹೆಗ್ಡೆ,ರಂಜಿತ್ ಪೂಜಾರಿ,ಜಗದೀಶ್ ಪೂಜಾರಿ, ಸಂತೋಷ್ ಕೋಟ್ಯಾನ್, ದಿನೇಶ್ ಪೂಜಾರಿ,ರಕ್ಷಿತ್,ಪ್ರಶಾಂತ್ ಕೋಟ್ಯಾನ್,ಶರತ್ ಅಂಚನ್,ಪ್ರಣಾಮ್ ಶೆಟ್ಟಿ,ಸುಧೀಶ್ ಪೂಜಾರಿ, ಯತೀಶ್ ವೈ,ಯೋಗೀಶ್ ಆರ್, ಪ್ರವೀಣ್ ಡಿ ಕೋಟ್ಯಾನ್, ಸಂಪತ್ ಕೋಟ್ಯಾನ್, ಚಂದ್ರಹಾಸ್ ಬಳಂಜ, ಕಿರಣ್ ಪೂಜಾರಿ, ಪ್ರಥಮ್, ಸಾಯಿ, ಸುಧೀರ್ ಸಾಲಿಯಾನ್,ಮಹೇಶ್ ಕುಲಾಲ್, ಜಯಪ್ರಸಾದ್ ಕೋಟ್ಯಾನ್, ಪ್ರಶಾಂತ್ ಅಂಚನ್, ಸತೀಶ್ ಕೋಟ್ಯಾನ್ ಹಾಗೂ ಅನಸೂಯ, ದೀಪಕ್ ಹೆಚ್.ಡಿ, ಸಂಧ್ಯಾ ಹೆಚ್.ಡಿ, ಅನರ್ಘ್ಯ, ಹೃತಿಕ್ ತಾರಿಪಡ್ಪು ಉಪಸ್ಥಿತರಿದ್ದರು.

Related posts

ಪುತ್ತೂರು ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ “ಯುರೇಕಾ 2025”- ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಏ.7 ರಿಂದ 12 ರ ವರೆಗೆ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಗಣೇಶ್ ಗೌಡ ನೆಲ್ಲಿಪಲ್ಕೆ ಬೆಂಬಲ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಏಳನೇ ದಿನದ ಬ್ರಹ್ಮ ಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಉಜಿರೆ: ಡೈನಮಿಕ್ ಡ್ಯಾನ್ಸ್ ಫ್ಯಾಕ್ಟರಿ & ಕಾಸ್ಟ್ಯೂಮ್ ಕಾರ್ನರ್ ಶುಭಾರಂಭ

Suddi Udaya

ಇಂದಬೆಟ್ಟು: ಬೆಳ್ಳೂರು ಬೈಲಿನ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ

Suddi Udaya
error: Content is protected !!