25 C
ಪುತ್ತೂರು, ಬೆಳ್ತಂಗಡಿ
May 24, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಅಂಗಡಿ ಮುಂದೆ ಕುಳಿತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಆರೋಪ : ಧರ್ಮಸ್ಥಳ ಪೊಲೀಸರಿಗೆ ದೂರು

ಕೊಕ್ಕಡ: ಅಂಗಡಿ ಮುಂಭಾಗದ ಜಗಲಿಯಲ್ಲಿ ಕುಳಿತ್ತಿದ್ದ ನನಗೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ, ಕೊಕ್ಕಡ ಪಿಜಿನಡ್ಕ ನಿವಾಸಿ ಮಂಚ್ಚ ಮುಗೇರ ಅವರು ಸೆ.೧ರಂದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.


ಸೆ.೦೧ರಂದು ಹಳ್ಳಂಗೇರಿಯ ರಾಮಣ್ಣ ಗೌಡರ ಅಂಗಡಿ ಬಳಿ ಬರುತ್ತಿದ್ದಂತೆ ಮಳೆ ಸುರಿದಿದ್ದು, ಛತ್ರಿ ಇಲ್ಲದ ಕಾರಣ ನಾನು ಅಂಗಡಿಯ ಮುಂಭಾಗದ ಜಗಲಿಯಲ್ಲಿ ಕುಳಿತ್ತಿದ್ದು, ಈ ವೇಳೆ ಬಂದ ರಾಮಣ್ಣ ಗೌಡ ಇಲ್ಲೇಕೆ ಕುಳಿತ್ತಿದ್ದ ಎಂದು ಪ್ರಶ್ನಿಸಿ, “ನೀವು ನಿಮ್ಮ ಜಾತಿಯ ಬುದ್ದಿಯನ್ನು ಬಿಡುವುದಿಲ್ಲ ಎಂದು” ಹೇಳಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ಬಳಿಕ ಅದೇ ರಸ್ತೆಯಲ್ಲಿ ಕೆಲಸ ಬಿಟ್ಟು ಬರುತ್ತಿದ್ದ ಅವರ ಸೊಸೆ (ಮಗನ ಪತ್ನಿ) ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದೂರು ನೀಡಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಧಾ ಆಚರಣೆ

Suddi Udaya

ಉಜಿರೆ : ಅಲ್-ಅಮೀನ್ ಯಂಗ್-ಮೆನ್ಸ್ ವತಿಯಿಂದ ಮಕ್ಕಳ ಸುನ್ನತ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಕೇರಿಮಾರು ಪ್ರ. ಕಾರ್ಯದರ್ಶಿಯಾಗಿ ಕೆ. ಬಾಲಕೃಷ್ಣ ಗೌಡ ಕಲ್ಲಾಜೆ ಆಯ್ಕೆ

Suddi Udaya

ಕಳಿಯ ಗ್ರಾ.ಪಂ.ನಲ್ಲಿ ಕಾವಲು ಸಮಿತಿ ಸಭೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿಧ್ಯಾರ್ಥಿಗಳಿಂದ ಅದ್ವಿತೀಯ ಸಾಧನೆ: 593 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ, ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದುಕೊಂಡು ಸಾಧನೆ: ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್

Suddi Udaya

ಇಂದಬೆಟ್ಟು: ಕುಡಿಯುವ ನೀರಿಗಾಗಿ ಗ್ರಾ.ಪಂ. ಮಾಜಿ ಸದಸ್ಯ ವೆಂಕಪ್ಪ ಕೋಟ್ಯಾನ್ ರಿಂದ ಪಂಚಾಯತ್ ಎದುರು ಪ್ರತಿಭಟನೆ: ಶೀಘ್ರವಾಗಿ ದುರಸ್ತಿ ಮಾಡಿಸಿಕೊಡುವುದಾಗಿ ಗ್ರಾ.ಪಂ. ಅಧ್ಯಕ್ಷೆ ಭರವಸೆ

Suddi Udaya
error: Content is protected !!