31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೆ.7: ಬಳಂಜ-ನಾಲ್ಕೂರು- ತೆಂಕಕಾರಂದೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬಳಂಜ-ನಾಲ್ಕೂರು- ತೆಂಕಕಾರಂದೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 37ನೇ ವರ್ಷದ
ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.7 ರಂದು ಬಳಂಜ ಶ್ರೀ ಶಾರದಾ ಕಲಾ ಮಂದಿರದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಹೆಗ್ಡೆ ಬಳಂಜ ತಿಳಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮ: ಬೆಳಿಗ್ಗೆ ಗಂಟೆ 7-೦೦ಕ್ಕೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ, ಬೆಳಿಗ್ಗೆ ಗಂಟೆ 8.30 ಕ್ಕೆ 24 ತೆಂಗಿನಕಾಯಿ ಗಣಪತಿ ಮಹಾಯಾಗ, ಬೆಳಿಗ್ಗೆ ಗಂಟೆ 8.45ಕ್ಕೆ ಗಣಪತಿ ದೇವರಿಗೆ ಬೆಳ್ಳಿಯ ಕಿರೀಟ ಸಮರ್ಪಣೆ, ಬೆಳಿಗ್ಗೆ ಗಂಟೆ 9.00 ಕ್ಕೆ ಬೆಳಗ್ಗಿನ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಬೆಳಿಗ್ಗೆ ಗಂಟೆ 8.30ಕ್ಕೆ ಬಳಂಜ ಗ್ರಾಮ ಪಂಚಾಯತ್‌ಗೊಳಪಟ್ಟ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳು:
ಪುರುಷರಿಗೆ: ವಾಲಿಬಾಲ್ (ಪ್ರಥಮ ರೂ. 3333/- +ಟ್ರೋಫಿ ದ್ವಿತೀಯ ರೂ. 2222/- +ಟ್ರೋಫಿ) ಸ್ಪರ್ಧಾಳುಗಳು ತಂಡವನ್ನು ರಚಿಸಿಕೊಂಡು ಬರುವುದು
ಕಬಡ್ಡಿ (ಪ್ರಥಮ ರೂ. 3333/- +ಟ್ರೋಫಿ ದ್ವಿತೀಯ ರೂ. 2222/- +ಟ್ರೋಫಿ) ಸ್ಪರ್ಧಾಳುಗಳು ತಂಡವನ್ನು ರಚಿಸಿಕೊಂಡು ಬರುವುದು
ಹಗ್ಗಜಗ್ಗಾಟ (ಪ್ರಥಮ ರೂ. 3333/- ದ್ವಿತೀಯ ರೂ. 2222/-)
ತಂಡವನ್ನು ಸ್ಥಳದಲ್ಲೇ ರಚಿಸಲಾಗುವುದು. ಶಾಟ್ ಪುಟ್
ಮಹಿಳೆಯರಿಗೆ:
ತ್ರೋಬಾಲ್, ಭಕ್ತಿಗೀತೆ ಸ್ಪರ್ಧೆ, ಲಕ್ಕಿಗೇಮ್, ಗುಂಡೆಸೆತ ಹಗ್ಗಜಗ್ಗಾಟ (ಪ್ರಥಮ ರೂ. 2222/- ದ್ವಿತೀಯ ರೂ. 1111/-) ತಂಡವನ್ನು ಸ್ಥಳದಲ್ಲೇ ರಚಿಸಲಾಗುವುದು
ಶಾಲಾ ಮಕ್ಕಳಿಗೆ; ಭಕ್ತಿಗೀತೆ ಸ್ಪರ್ಧೆ, ಹೂಮಾಲೆ ಕಟ್ಟುವುದು, ಹಗ್ಗಜಗ್ಗಾಟ, ಗಣೇಶನ ಚಿತ್ರ ಬಿಡಿಸುವುದು.

10.00 ಗಂಟೆಗೆ ಸರಿಯಾಗಿ ಅಳದಂಗಡಿ ವಲಯ ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಶಾಲಾ ಮಕ್ಕಳಿಗೆ 1 ರಿಂದ 4ನೇ ತರಗತಿ ಪ್ರಥಮ ರೂ.3೦೦೦/- ದ್ವಿತೀಯ ರೂ. 2೦೦೦/- ತೃತೀಯ ರೂ. 1೦೦೦/- 5ರಿಂದ 8ನೇ ತರಗತಿಪ್ರಥಮ ರೂ.3೦೦೦/-ದ್ವಿತೀಯ ರೂ.2೦೦೦/- ತೃತೀಯ ರೂ. 1೦೦೦/- 8ರಿಂದ 10ನೇ ತರಗತಿ ಪ್ರಥಮ ರೂ.3೦೦೦/- ದ್ವಿತೀಯ ರೂ. 2೦೦೦/- ತೃತೀಯ ರೂ. 1೦೦೦/-

ವಿಶೇಷ ಆಕರ್ಷಣೆ ಹೋಳಿ ರಂಗಿನಾಟ: ಜಿಲ್ಲೆಯ ಹೆಸರಾಂತ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ, ಪುಟಾಣಿ ಮಕ್ಕಳಿಂದ, ಶಾಲಾ ಕಾಲೇಜು ವಿದ್ಯಾರ್ಥಿ ಗಳಿಂದ ಸ್ಥಳೀಯ ಸಂಘ ಸಂಸ್ಥೆ ಮತ್ತು ಊರವರಿಂದ ಮನೋರಂಜನಾ ಕಾರ್ಯಕ್ರಮ, ಕೇರಳದ ಕಲಾವಿದರಿಂದ ವಿಶೇಷ ಚೆಂಡೆ ಪ್ರದರ್ಶನ, ಸುಡುಮದ್ದು ಪ್ರದರ್ಶನ

ಸಾಯಂಕಾಲ ಗಂಟೆ 5-೦೦ಕ್ಕೆ ಮಹಾಪೂಜೆ, ಮಂಗಳಾರತಿ ಸಾಯಂಕಾಲ ಗಂಟೆ 5.30ಕ್ಕೆ ದೇವರ ಭವ್ಯ ಶೋಭಾಯಾತ್ರೆಯು ವಿವಿಧ ವೇಷ ಭೂಷಣಗಳೊಂದಿಗೆ ಸುಡುಮದ್ದು ಪ್ರದರ್ಶನ, ಕಲಾ ತಂಡಗಳ ಸಹಿತ ಕಾಪಿನಡ್ಕ ಪಲ್ಗುಣಿ ನದಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ.



Related posts

ಶಿರ್ಲಾಲು ಶ್ರೀ ದೈವ ಕೊಡಮಣಿತ್ತಾಯ ಮತ್ತು ಬೆರ್ಮೆರ್ ಬೈದೆರ್ಲೆ ಗರಡಿಯ ವಾರ್ಷಿಕ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರವಾಯನಕೆರೆ: ವಿದ್ವತ್ ಕಾಲೇಜಿನಲ್ಲಿ ಆಂಗ್ಲ ಭಾಷೆ ಉಪನ್ಯಾಸಕರ ಕಾರ್ಯಾಗಾರ

Suddi Udaya

ಸಿಯೋನ್ ಆಶ್ರಮ: ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಸಚಿವ ಮಾಂಕಾಳ್ ಎಸ್. ವೈದ್ಯ ಭೇಟಿ

Suddi Udaya

ನಡ: ಸಿಡಿಲು ಬಡಿದು ಹಾನಿ: ಸಾಬ್ ಜನ್ ರವರ ಮನೆಗೆ ಎಂ.ಎಲ್.ಸಿ. ಹರೀಶ್ ಕುಮಾರ್ ಭೇಟಿ

Suddi Udaya

ಬೆಳ್ತಂಗಡಿ: ನೇಮಿರಾಜ್ ಬುಣ್ಣು ನಿಧನ

Suddi Udaya
error: Content is protected !!