April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೈಕ್ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಬೆಳಾಲಿನ ಶೀನಪ್ಪ ಗೌಡ ನಿಧನ

ಬೆಳಾಲು: ಬೆಳಾಲು ಗ್ರಾಮದ ಜಲಕ್ಕಾರು ನಿವಾಸಿ ಶೀನಪ್ಪ ಗೌಡ (65ವ) ರವರು ಬೆಳಾಲಿನ ಪೀನಾರಿ ಎಂಬಲ್ಲಿ ನಡೆದ ಬೈಕ್ ಅಪಘಾತದಲ್ಲಿ ಚಿಕಿತ್ಸೆ ಫಲಿಸದೆ ಸೆ.5ರಂದು ಸಾವನ್ನಪ್ಪಿದರು.

ಅವರು ಸೆ.4ರಂದು ಸಂಜೆ ಬೆಳಾಲಿನ ಹಾಲಿನ ಡೈರಿಗೆ ಹಾಲು ಹಾಕಿ ವಾಪಾಸು ಮನೆಗೆ ಬರುವ ವೇಳೆಗೆ ಪೀನಾರಿ ಎಂಬಲ್ಲಿ ಬೈಕ್ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದರು. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ನಿಧನರಾದರು. ಇವರ ಬೈಕ್ ಸ್ಕಿಡ್ ಆಗಿ ಈ ಘಟನೆ ನಡೆಯಿತೊ, ಅಥವಾ ಬೊಲೇರೊ ಡಿಕ್ಕಿ ಹೊಡೆದು ಈ ಘಟನೆ ನಡೆಯಿತೊ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Related posts

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ ನಾರ್ತ್ ಕೆರೊಲಿನಾ ದಂತ ವೈದ್ಯಕೀಯ ವಿದ್ಯಾರ್ಥಿ ತಂಡ ಭೇಟಿ

Suddi Udaya

ಸುಲ್ಕೇರಿ ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಮಿತಿಯಿಂದ ಶ್ರೀ ಗುರುಪೂಜೆ: ಮಾತೃ ಸಂಘದಿಂದ ಮಂಜೂರಾದ 2 ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಣೆ

Suddi Udaya

ದಿವ್ಯಾಂಗರಿಗೆ ಗಾಲಿ ಕುರ್ಚಿ ಗಳ ವಿತರಣೆ

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಗೆಲುವು: ಬೈಕ್ ಜಾಥದ ಮುಖೇನಾ ಗೆಲುವನ್ನು ಸಂಭ್ರಮಿಸಿದ ನಾಲ್ಕೂರಿನ ಕಾರ್ಯಕರ್ತರು

Suddi Udaya

ಮದ್ದಡ್ಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಜನಾ ಸಮಿತಿಯಿಂದ ತುಮಕೂರು ಜಿಲ್ಲೆಯ ಶಿರಾದಲ್ಲಿ ಸುಮಾರು 5೦ ಮಕ್ಕಳಿಗೆ ಉಚಿತ ಭಜನಾ ತರಬೇತಿ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್‌ ಅಕೌಂಟಿಂಗ್‌ ತರಬೇತಿಯ ಸಮಾರೋಪ ಸಮಾರಂಭ

Suddi Udaya
error: Content is protected !!