ಬೆಳ್ತಂಗಡಿ :ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳ್ತಂಗಡಿಯಲ್ಲಿ 63ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.೭ರಿಂದ ಸೆ.೧೧ರವರೆಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನ ಸಮಾಜ ಮಂದಿರ ರಸ್ತೆ, ಬೆಳ್ತಂಗಡಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಸೆ.7ರಂದು ಬೆಳಿಗ್ಗೆ ಮೂರ್ಜೆ ಶಿವಶಂಕರ ಪ್ರಭು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಮತಿಯ ಅಧ್ಯಕ್ಷರಾದ ಗಣೇಶ್ ಕನ್ನಾ ಜೆ. ಕಾರ್ಯದರ್ಶಿ ಧನಂಜಯ್. ಕೋಶಧಿಕಾರಿ ಜಗದೀಶ್ ಕನ್ನಾಜೆ. ಗೌರವ ಸಲಹೆಗಾರದ ರಾಜೇಶ್ ಪ್ರಭು ಶಂಕರ್ ಹೆಗ್ಡೆ. ಚಂದ್ರಶೇಖರ ಕನ್ನಾಜೆ. ಕಮಲಾಕ್ಷ.ಜೊತೆ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ. ಸಂಕೇತ್ ಶೆಟ್ಟಿ. ನಾಗೇಶ್ ಉಪಸ್ಥಿದ್ದರು..ನಂತರ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸೆ.೮ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ೬.೩೦ರಿಂದ ಶಿರಡಿ ಶ್ರೀ ಸತ್ಯಸಾಯಿ ಕ್ಷೇತ್ರ ಹಳೆಕೋಟೆ ಇವರಿಂದ ಇವರಿಂದ ಭಜನೆ ನಡೆಯಲಿದೆ., ಸೆ.9 ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 6ರಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರಿಂದ ಪ್ರದರ್ಶನ ಬೃಗು ಲಾಂಛನ-ಶ್ರೀನಿವಾಸ ಕಲ್ಯಾಣ ಶಬರಾರ್ಜುನ ಯಕ್ಷಗಾನ ಪ್ರದರ್ಶನ, ಸೆ.10ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಮ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 7ರಿಂದ ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ “ಕಲಾ ವೈಭವ”, ಸೆ.11ರಂದು ಬೆಳಿಗ್ಗೆ ಧಾರ್ಮಿಕ ಸಭೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಮಹಾಪೂಜೆ, ಪ್ರಸಾದ ವಿತರಣೆ ನಂತರ ವೈಭವ ಪೂರ್ಣ ಶೋಭಾಯಾತ್ರಯೊಂದಿಗೆ ಬೆಳ್ತಂಗಡಿಯ ಪುಣ್ಯನದಿಯಲ್ಲಿ ಶ್ರೀ ವಿಶ್ವೇಶ್ವರನ ವಿಗ್ರಹ ವಿಸರ್ಜನೆ ನಡೆಯಲಿದೆ