September 6, 2026
Uncategorized

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಹರ್ಷಿತ ಆಯ್ಕೆ

ಉಜಿರೆ :ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪದವಿಪೂರ್ವ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಬೆಂಗಳೂರಿನ ಗಾಂಧೀ ಭವನದಲ್ಲಿ ಸೆ. 17 ರಿಂದ 23 ರ ವರೆಗೆ ನಡೆಯುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಸ್ವಯಂ ಸೇವಕಿ ಹರ್ಷಿತಾ ಆಯ್ಕೆ ಆಗಿದ್ದಾರೆ.

ಈಕೆ ಇದೀಗ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದು , ರಾಜ್ಯ ಮಟ್ಟದ ಯೋಗ ಸ್ಪರ್ಧಾಪಟು ಕೂಡ ಆಗಿದ್ದಾಳೆ. ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವುದರೊಂದಿಗೆ ಪ್ರಬಂಧ ಬರಹ , ಪೋಸ್ಟರ್ ರಚನೆ , ಏಕಪಾತ್ರಾಭಿನಯ , ನೃತ್ಯ , ಪ್ರಹಸನ , ಕಾರ್ಯಕ್ರಮ ನಿರ್ವಹಣೆ ಇತ್ಯಾದಿಗಳಲ್ಲಿಯೂ ತೊಡಗಿಸಿಕೊಂಡಿದ್ದಾಳೆ.
ಪ್ರೌಢಶಾಲೆಯ ಎನ್ ಸಿ ಸಿ ಯಲ್ಲಿ ಸಾರ್ಜೆಂಟ್ ಕೂಡ ಆಗಿದ್ದ ಈಕೆ ಉಜಿರೆಯ ರೆಂಜಾಳದ ಅಣ್ಣು ನಾಯ್ಕ್ ಹಾಗೂ ಸುಶೀಲಾ ದಂಪತಿಯ ಪುತ್ರಿ.
ಇವಳ ಆಯ್ಕೆಗೆ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಶುಭ ಹಾರೈಸಿದ್ದಾರೆ.

Related posts

ನಾಲ್ಕೂರು: ನಿಟ್ಟಡ್ಕ, ಪುಣ್ಕೆದೊಟ್ಟು, ಪರಿಸರದಲ್ಲಿ ಹೆಚ್ಚಿದ ಚಿರತೆ ಕಾಟ, ಭಯಭೀತರಾದ ಗ್ರಾಮಸ್ಥರು

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವರನ್ನು ಗಡಿಪಾರು ಮಾಡಲು ಪೊಲೀಸ್‌ ಇಲಾಖೆ ಸಿದ್ದತೆ

Suddi Udaya

ಎರ್ಡೂರು ನಿರಂಜನ್ ರಾವ್ ನಿಧನ

Suddi Udaya

ಗಣಿತ ರಿಲೇ ಸ್ಪರ್ಧೆ ಹಾಗೂ ಪ್ರತಿಭಾ ಕಾರಂಜಿಯ ಆಶುಭಾಷಣ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಕುಂಭಶ್ರೀ ವಿದ್ಯಾಸಂಸ್ಥೆಗೆ ರನ್ನರ್ ಅಪ್

Suddi Udaya

ಜೂ.12 ಬೆಳ್ತಂಗಡಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ

Suddi Udaya

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತಿಹಾಸ ಕಂಡರಿಯದೆ ದೊಡ್ಡ ಮಟ್ಟದ ಪ್ರವಾಹದಿಂದಾಗಿ ತೀವ್ರಮಟ್ಟದ ಹಾನಿ: ಸಂಕಷ್ಟಕಿಡಾಗಿರುವ ಜನತೆಗೆ ಪುನರ್ವಸತಿ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ವಿ.ಪ. ಶಾಸಕ ಪ್ರತಾಪಸಿಂಹ ನಾಯಕ್ ರಿಂದ ಮುಖ್ಯಮಂತ್ರಿಗಳಿಗೆ ಮನವಿ

Suddi Udaya
error: Content is protected !!