ಮೇಲಂತಬೆಟ್ಟು : ಸೆ.10ರಂದು ರಂದು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸವಿತಾ ರವರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಪ್ರಥಮ ಸುತ್ತಿನ ಗ್ರಾಮಸಭೆಯು ಕೊರಂ ಕೊರತೆಯಿಂದಾಗಿ ಮುಂದೂಡಲಾಗಿದೆ.
ಗ್ರಾಮಸ್ಥರಾದ ರಾಜೇಶ್ ಭಟ್ ಮಾತನಾಡಿ ಮೂರು ವಾರ್ಡ್ ಗಳ ಗ್ರಾಮಸ್ಥರನ್ನು ತಾಳೆ ಮಾಡಿ ನೋಡಿದಾಗ ಸಭೆಗೆ ಹಾಜರಾದ ಗ್ರಾಮಸ್ಥ ಸಂಖ್ಯೆ ಕಡಿಮೆಯಾಗಿದೆ. ಕಾನೂನು ಪ್ರಕಾರ ಗ್ರಾಮಸಭೆಯಲ್ಲಿ 100 ಜನ ಗ್ರಾಮಸ್ಥರು ಭಾಗಿಯಾಗಬೇಕು ಎಂದರು.
ಗ್ರಾಮಸ್ಥರಲ್ಲಿ ಸಭೆಯ ಮುಂದೂಡಿಕೆಯ ಚರ್ಚೆಗಳು ನಡೆದು, ಅಧ್ಯಕ್ಷರಾದ ಶ್ರೀಮತಿ ಸವಿತಾ ರವರು ಗ್ರಾಮಸ್ಥರ ಅಭಿಪ್ರಾಯವನ್ನು ಪಡೆದು ಗ್ರಾಮ ಸಭೆಯನ್ನು ಮುಂದೂಡಿದರು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್ ರವರು ಗ್ರಾಮ ಸಭೆಯನ್ನು ಮುನ್ನಡೆಸಿದರು.
ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಸದಸ್ಯರಾದ ಶ್ರೀಮತಿ ಸುಮಲತಾ, ಪ್ರಭಾಕರ ಆಚಾರ್ಯ, ಚಂದ್ರಶೇಖರ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಜಯಲಕ್ಷ್ಮಿ, ವೇಣುಗೋಪಾಲ ಶೆಟ್ಟಿ, ಶ್ರೀಮತಿ ದೀಪಿಕಾ, ಶ್ರೀಮತಿ ಶಶಿಕಲಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್ ಸ್ವಾಗತಿಸಿದರು. ಪಂ. ಅಭಿವೃದ್ಧಿ ಅಧಿಕಾರಿ ಶ್ರೀಧರ ಹೆಗ್ಡೆ ನಿರೂಪಿಸಿ, ಧನ್ಯವಾದವಿತ್ತರು.