September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಜೆಸಿಐ ಕೊಕ್ಕಡ ಕಪಿಲಾ ವತಿಯಿಂದ ಸ.ಕಿ.ಪ್ರಾ. ಶಾಲೆಯಲ್ಲಿ ಜನಗಣಮನ ಬರವಣಿಗೆ ಸ್ಪರ್ಧೆ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ವತಿಯಿಂದ ಜೆಸಿ ಸಪ್ತಾಹದ ಅಂಗವಾಗಿ ಐದನೇ ದಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಳಕ್ಕೆಬೈಲು ಶಿಶಿಲದಲ್ಲಿ ಜನಗಣಮನ ಬರವಣಿಗೆ ಸ್ಪರ್ಧೆ ಕಾರ್ಯಕ್ರಮವನ್ನು ಸೆ.13ರಂದು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಳಕ್ಕೆಬೈಲು ಶಿಶಿಲ ಶಾಲಾ ಮುಖ್ಯೋಪಾಧ್ಯಾಯ ರೊನಾಲ್ಡ್ ಮೆನೆಜಿಸ್ ಪ್ರಾಸ್ತಾವಿಕ ಮಾತುಗಳನ್ನು ನುಡಿದರು.

ವಿಜೇತ ಮಕ್ಕಳಾದ ಯಶ್ವಿ, ರೂಪೇಶ್, ಸಿಂಚನಾ, ಧನ್ವಿತಾ, ತನ್ವಿತಾ, ತನ್ವಿ, ವರ್ಷಿತ್, ಪ್ರತಿಜ್ಞಾ, ವರ್ಷಿತಾ, ತೇಜಸ್, ಜನಗಣಮನ ಬರವಣಿಗೆಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಮಾರ್ಗದರ್ಶಕ ಜೋಸೆಫ್ ಪಿರೇರ, ಜೆಸ್ಸಿಂತ ಡಿಸೋಜ, ನಿಕಟ ಪೂರ್ವಾಧ್ಯಕ್ಷ ಜಿತೇಶ್ ಎಲ್ ಪಿರೇರ, ಯೋಜನೆ ನಿರ್ದೇಶಕರು ಕೆ. ಶ್ರೀಧರ್ ರಾವ್, ಶಾಲಾ ಶಿಕ್ಷಕರಾದ ಶ್ರೀಮತಿ ಸುಮ ಸಂಜಯ್, ಸಂತೋಷ್, ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್, ಜೆಸಿ ಸುಗುಣ ಉಪಸ್ಥಿತರಿದ್ದರು.

ಕಾರ್ಯಕ್ರಮದ ಜೆಸಿವಾಣಿ ರಾಜಾರಾಮ ಟಿ ವಾಚಿಸಿದರು, ಜೆಸಿಐ ನ ಅಧ್ಯಕ್ಷ ಸಂತೋಷ್ ಜೈನ್ ಸ್ವಾಗತಿಸಿ, ಜೆಸಿ ಗಿರಿಜಾ ಧನ್ಯವಾದವಿತ್ತರು.

Related posts

ಸುಲ್ಕೇರಿಮೊಗ್ರು ಸ.ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆ: ನೂತನ ಸಮಿತಿ ರಚನೆ

Suddi Udaya

ಎಸ್.ಎಸ್.ಎಲ್.ಸಿ ವಾರ್ಷಿಕ ಫಲಿತಾಂಶ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ. 97

Suddi Udaya

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ 2025 ರ ಕ್ಯಾಲೆಂಡರ್ ಬಿಡುಗಡೆ

Suddi Udaya

ಅಳದಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಪೋಷಕರ ಸಭೆ

Suddi Udaya

ಕೊಯ್ಯೂರು: ದೇಂತ್ಯಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಮೇಲಂತಬೆಟ್ಟು ತ್ರಿವೇಣಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!