ಬಂದಾರು : .ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ,ಬ್ರಹ್ಮ ಕಲಶೋತ್ಸವ ಸಮಾಲೋಚನೆ ಸಭೆ ದೇವಸ್ಥಾನದ ವಠಾರದಲ್ಲಿ ಸೆ.15 ರಂದು ನಡೆಯಿತು.
ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಿಂದ ಗ್ರಾಮದ ಜನರಿಗೆ ಮಾತ್ರವಲ್ಲ ಸಕಲಜೀವ ರಾಶಿಗೂ ಒಳ್ಳೆಯ ಪರಿಣಾಮ ಬೀರುತ್ತದೆ. ಪೆರ್ಲಬೈಪಾಡಿ ಅಷ್ಠ ಬ್ರಹ್ಮ ಕಲಶೋತ್ಸವ ವಿಜ್ರಂಭಣೆ ನೆರವೇರಿಸಲು ಗ್ರಾಮಸ್ಥರು ಸಂಪೂರ್ಣವಾಗಿ ತೊಡಗಿಸಿಕೊಂಡು ಸಹಕಾರ ನೀಡಬೇಕು ಎಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಹೇಳಿದರು.
ಕಳೆದ 13 ವರ್ಷಗಳ ಹಿಂದೆ ನಡೆದ ಅಷ್ಠಬಂಧ ಬ್ರಹ್ಮ ಕಲಶೋತ್ಸವ ಯಶಸ್ವಿಯಾಗಿದೆ.ಕಠಿಣ ಪರಿಶ್ರಮದಿಂದ ಒಗ್ಗೂಡಿಸುವ ಮೂಲಕ ಪೆರ್ಲ ಬೈಪಾಡಿ ರಾಜಕೀಯ ರಹಿತವಾದ ಬ್ರಹ್ಮ ಕಲಶೋತ್ಸವ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದು ಧಾರ್ಮಿಕ ಕೆಲಸಗಳಿಗೆ ಮಾದರಿಯಾಗಿದೆ.
ಭಜನಾ ಮಂಡಳಿ ಹಾಗೂ ಮಹಿಳಾ ಮಂಡಳಿಗಳು ದೇವಸ್ಥಾನ ಅಭಿವೃದ್ಧಿಗೆ ಅಧಾರ ಸ್ತಂಭಗಳು ಆಗಿವೆ.ಗ್ರಾಮಸ್ಥರು,ಊರ,ಪರಊರ ಭಕ್ತಾದಿಗಳ ಸಹಕಾರದಿಂದ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗದ ಮುಖ್ಯಸ್ಥರಾದ ಬಾಲಕೃಷ್ಣ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.ದೇವಸ್ಥಾನದ ಅಡಳಿತ ಅನುವಂಶಿಕ ಮೊಕ್ತೇಸರಾದ ಕುಕ್ಕಪ್ಪ ಗೌಡ, ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತರಾಮ ಶಬರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಷ್ಠಬಂಧ ಬ್ರಹ್ಮ ಕಲಶೋತ್ಸವದ ವಿವಿಧ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶಂಕರ ಮಯ್ಯ,ಕೃಷ್ಣಯ್ಯ ಆಚಾರ್ಯ, ಧರ್ಣಪ್ಪ ಗೌಡ, ತಿಮ್ಮಪ್ಪ ಗೌಡ,ವಿಶ್ವನಾಥ ಪೂಜಾರಿ, ಲಿಂಗಪ್ಪ ಗೌಡ ಅನಿಲ,ನಾರಾಯಣ ಗೌಡ ಪಯ್ಯೋಡಿ,ರಾಜೇಶ್ ಜೈನ್,ಹೋನ್ನಪ್ಪ ಗೌಡ, ಉಮೇಶ್ ಗೌಡ, ಬಾಲಕೃಷ್ಣ ಗೌಡ,ಹರೀಶ್ ಗೌಡ,ಕೇಶವ ಗೌಡ, ದಿವಾಕರ ಗೌಡ,ಲಕ್ಷ್ಮೀ ಕಾಂತ್,ಅನಂದ ಗೌಡ ಮೋನಪ್ಪ ಗೌಡ ಅದಪ್ಪ ಗೌಡ, ಲಕ್ಷ್ಮಣ ಗೌಡ,ಹರೀಶ್ ಗೌಡ, ಸುಮಿತ್ರಾ, ಭಾಗ್ಯ, ಮೋಹಿನಿ,ಸುಜಾತ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಮಹಬಲ ಗೌಡ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ಶ್ರೀನಿವಾಸ ಗೌಡ ಕಾರ್ಯಕ್ರಮ ನಿರೂಪಣೆ ಮಾಡಿದರು.