25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿಡ್ಲೆ: ಬೂಡುಜಾಲು ಹಾ.ಉ. ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ

ನಿಡ್ಲೆ: ಬೂಡುಜಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.16ರಂದು ಸಂಘದ ಆವರಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಿಥುನ್ ಕೆ. ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಸತ್ಯನಾರಾಯಣ ರಾವ್, ಅಂತರಿಕ ಲೆಕ್ಕ ಪರಿಶೋಧಕ ಗೋವಿಂದ ಭಟ್, ಉಪಾಧ್ಯಕ್ಷ ಕೊರಗಪ್ಪ ಗೌಡ, ನಿರ್ದೇಶಕರಾದ ಸುಧೀಂದ್ರ ರಾವ್, ನಾರಾಯಣ ಎನ್, ಸೇಸಪ್ಪ ಗೌಡ, ಮೋನಪ್ಪ ಗೌಡ, ಬಾಬು ಎಮ್.ಕೆ, ಗಿರೀಶ್ ಗೌಡ, ಶ್ರೀಮತಿ ರಮಣಿ ಬಿ, ಶ್ರೀಮತಿ ವಿದ್ಯಾಲತಾ ಉಪಸ್ಥಿತರಿದ್ದರು.

ದ.ಕ ಹಾಲು ಒಕ್ಕೂಟ ಶಿಬಿರ ಕಛೇರಿ ಬೆಳ್ತಂಗಡಿಯ ವಿಸ್ತರಣಾಧಿಕಾರಿ ರಾಜೇಶ್ ಪಿ.ಕೆ ಮಾಹಿತಿ ನೀಡಿದರು.

ಕಾರ್ಯದರ್ಶಿ ವೆಂಕಟೇಶ್ ಗೌಡ ವರದಿ ನೀಡಿದರು. ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಿಸಲಾಯಿತು. 2023-24 ರಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಅಧ್ಯಕ್ಷ ಮಿಥುನ್ ಕೆ. ಹಾಗೂ ವನಿತಾ ಎ., ರನ್ನು ಗೌರವಿಸಲಾಯಿತು.

ಉಪಾಧ್ಯಕ್ಷ ಕೊರಗಪ್ಪ ಗೌಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸುಧೀಂದ್ರ ರಾವ್ ವಂದಿಸಿದರು. ಸಹಾಯಕಿ ಶ್ರೀಮತಿ ಯಶೋಧ ಸಹಕರಿಸಿದರು.

Related posts

ತಲೆ ಮರೆಸಿಕೊಂಡಿದ್ದ ಆರೋಪಿ ನೆಲ್ಯಾಡಿ ಯಲ್ಲಿ ಬಂಧನ

Suddi Udaya

ಫೆ.1-5: ನಿಟ್ಟಡೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರ ಬರ್ಕಜೆಯಲ್ಲಿ 9ನೇ ವರ್ಷದ ಜಾತ್ರಾ ಮಹೋತ್ಸವ

Suddi Udaya

ಅರುವ ನಮ ಮಾತೆರ್ಲ ಒಂಜೇ ಕಲಾ ತಂಡದ ಪದಾಧಿಕಾರಿಗಳ ಆಯ್ಕೆ

Suddi Udaya

ದ.ಕ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಬೆಳ್ತಂಗಡಿಯ ಯುವ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್ ಆಯ್ಕೆ

Suddi Udaya

ದೀಪಾವಳಿ ಗೋ ಪೂಜೆ ಪ್ರಯುಕ್ತ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿಯಿಂದ ಗೋವುಗಳಿಗೆ ಉಪಾಹಾರ

Suddi Udaya

ಹೊಸಪಟ್ಣ ದೊಡ್ಯಾರು ಮನೆಯ ಶ್ರೀಮತಿ ಸುಂದರಿ ನಿಧನ

Suddi Udaya
error: Content is protected !!