28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿ

ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ

ಬೆಳ್ತಂಗಡಿ: ಮರಾಟಿ‌ ನಾಯ್ಕ್ ಸಮುದಾಯದ ಐಕ್ಯತೆ ಹಾಗೂ ಅಭಿವೃದ್ಧಿಗೆ ಮೂಡಬಿದಿರೆಯಲ್ಲಿ ಗದ್ದಿಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮುದಾಯದ ಜನತೆ ಪಾಲ್ಗೊಂಡು ನಮ್ಮ ಸಂಸ್ಕ್ರತಿ, ಸಂಸ್ಕಾರಗಳ ಬಗ್ಗೆ ಅರಿತುಕೊಂಡು ಇದರ ಪ್ರಯೋಜನ ಪಡೆಯಬೇಕು. ಅಕ್ಟೋಬರ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಂಗವಾಗಿ ಉದ್ಯೋಗ ಮೇಳವೂ ನಡೆಯಲಿದ್ದು ನೋಂದಣಿ ಮಾಡಿಕೊಂಡು ತಾಲೂಕಿನ ಯುವಕರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಹೆಚ್.ಎಲ್. ಹೇಳಿದರು.
ಅವರು ಗುರುವಾಯನಕೆರೆಯ ಸತೀಶ್ ಅವರ ನಿವಾಸ ‘ಸವಿನೆಲೆ’ಯಲ್ಲಿ ಇತ್ತೀಚೆಗೆ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ವಧು – ವರರ ಸಮಾವೇಶ ನವೆಂಬರ್‌ನಲ್ಲಿ ನಡೆಯಲಿದ್ದು ಪೂರ್ವಸಿದ್ಧತೆ ನಡೆಸಲಾಗುತ್ತಿದೆ. ಇದರ ಮೂಲಕ ಯುವ ಸಮೂಹ ಎದುರಿಸುತ್ತಿರುವ ವಿವಾಹ ಸಮಸ್ಯೆಗೆ ಪರಿಹರಿಸುವ ಪ್ರಯತ್ನ ಸಂಘದಿಂದ ಮಾಡಲಾಗುತ್ತಿದೆ. ಅರ್ಹರು ಶೀಘ್ರವಾಗಿ ನಿಗದಿತ ನಮೂನೆಯಲ್ಲಿ ‌ನೋಂದಣಿ ಕಾರ್ಯ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ವಿವಿಧ ವಿಚಾರಗಳ‌ ಕುರಿತು ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಕೊರಗಪ್ಪ ನಾಯ್ಕ್, ಗೌರವ ಸಲಹೆಗಾರ ಉಮೇಶ್ ನಾಯ್ಕ್ ಕೇಳ್ತಡ್ಕ, ಕುಮಾರಯ್ಯ ನಾಯ್ಕ, ಉಪಾಧ್ಯಕ್ಷರಾದ ವಸಂತ ನಾಯ್ಕ್, ಪ್ರಭಾಕರ ನಾಯ್ಕ್, ಕಾರ್ಯದರ್ಶಿಗಳಾದ ಪ್ರಸಾದ್ ನಾಯ್ಕ್, ಪವಿತ್ರ, ಕೋಶಾಧಿಕಾರಿ ಹರೀಶ್ ಪೆರಾಜೆ, ವಿವಿಧ ವಿಭಾಗಗಳ ಪದಾಧಿಕಾರಿಗಳಾದ ಶ್ರೀನಿವಾಸ ನಾಯ್ಕ್, ರಾಘವೇಂದ್ರ ನಾಯ್ಕ್, ರಾಜೇಶ್ ನಾಯ್ಕ್, ರಾಘವೇಂದ್ರ ನಾಯ್ಕ್, ರಜನೀಶ್ ನಾಯ್ಕ್, ಭಾಸ್ಕರ ನಾಯ್ಕ್, ಹರ್ಷಿತ್, ವಿಶಾಲ, ಸತೀಶ್ ಹೆಚ್.ಎಲ್. ಕುಟುಂಬಸ್ಥರು ಉಪಸ್ಥಿತರಿದ್ದರು.
ನಿತ್ಯೂಷ ಪ್ರಾರ್ಥಿಸಿದರು‌.
ಪ್ರಧಾನ ಕಾರ್ಯದರ್ಶಿ ತಾರನಾಥ ನಾಯ್ಕ್ ಸ್ವಾಗತಿಸಿ, ಸುರೇಶ್ ಹೆಚ್. ಎಲ್. ವಂದಿಸಿದರು‌.

Related posts

ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳ ದಾಳಿ: ಅಪಾರ ಹಾನಿ

Suddi Udaya

ಉಜಿರೆಯಲ್ಲಿ ಸರಣಿ ಅಪಘಾತ, ಐದು ವಾಹನಗಳು ಜಖಂ

Suddi Udaya

ಎಸ್‌ಡಿಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಶ್ವಥಕಟ್ಟೆ ನಿರ್ಮಾಣದ ಶಿಲಾನ್ಯಾಸ

Suddi Udaya

ಹಳೆಪೇಟೆ ಮುಹಿಯುದ್ದಿನ್ ಜುಮ್ಮಾ ಮಸ್ಜಿದ್ ಈದ್-ಉಲ್-ಫಿತರ್ ಆಚರಣೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಹನ್ನೆರಡನೇ ಸುತ್ತಿನಲ್ಲಿ 11360 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya
error: Content is protected !!