25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆದ್ರಬೆಟ್ಟು ಅರ್ರಿಫಾಯ್ಯಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಬೆದ್ರಬೆಟ್ಟು: ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ಅವರ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಆಚರಣೆಯ ರ‍್ಯಾಲಿ ಇಂದು(ಸೆ.16) ಅರ್ರಿಫಾಯ್ಯಾ ಮಸೀದಿ ಬೆದ್ರಬೆಟ್ಟುವಿನಲ್ಲಿ ಸಂಭ್ರಮದಿಂದ ನಡೆಯಿತು.

ಮದ್ರಸಗಳ ಮಕ್ಕಳಿಂದ ಪ್ರವಾದಿ ಗುಣಗಾನದ ಹಾಡುಗಳು, ದಫ್‌ ನೊಂದಿಗೆ ಪ್ರವಾದಿ ಜೀವನದ ಸಂದೇಶ ನೀಡುವುದರ ಮೂಲಕ ಬೆದ್ರಬೆಟ್ಟುವಿನಿಂದ ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾ ವಠಾರದಲ್ಲಿ ಸಾಮೂಹಿಕ ಪ್ರಾರ್ಥನೆ ಮೂಲಕ ಈ ಬಾರಿಯ ಬೃಹತ್ ಮೀಲಾದ್ ರ‍್ಯಾಲಿಯು ಸಾರ್ವಜನಿಕರ ಗಮನ ಸೆಳೆಯಿತು.


ರ‍್ಯಾಲಿಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ಹಂಚಿ, ಪಾನೀಯ ನೀಡಲಾಯಿತು. ಮೀಲಾದ್ ರ‍್ಯಾಲಿಯಲ್ಲಿ ಮಕ್ಕಳಲ್ಲದೆ ಹಿರಿಯರೂ ಪಾಲ್ಗೊಂಡು ಮಿಲಾದುನ್ನಬಿಯ ಸಡಗರ, ಸಂಭ್ರಮಕ್ಕೆ ಸಾಕ್ಷಿಯಾದರು.


ರ‍್ಯಾಲಿಗೂ ಮುನ್ನ ಮಸೀದಿ ವಠಾರದಲ್ಲಿ ರಿಫಾಯ್ಯಾ ಮಸೀದಿ ಅಧ್ಯಕ್ಷರಾದ ಸಲೀಂ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ಮಾಡಿದರು. ಮಸೀದಿ ಧರ್ಮ ಗುರುಗಳು ಮಿಲಾದ್ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿ ಈದ್ ಮಿಲಾದ್ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ,ಮಿಲಾದ್ ಸಮಿತಿ,ಯಂಗ್ ಮೆನ್ಸ್ ಸಮೀತಿ, SSF ಬೆದ್ರಬೆಟ್ಟು ಶಾಖೆ ಸಮಿತಿ, ಮದರಸ ಅಧ್ಯಾಪಕರು ಹಾಗೂ ಊರಿನ ಹಿರಿಯರು,ಜಮತಿನ ಸರ್ವ ಮುಸ್ಲಿಮರು ಮತ್ತು ಮದರಸ ವಿದ್ಯಾರ್ಥಿಗಳು ಸೇರಿದ್ದರು.


ಮದರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳು ಮಿಲಾದ್ ಮೌಲಿದ್ ಸಾಮೂಹಿಕ ಪ್ರಾರ್ಥನೆ ಮತ್ತು ಸಭಾ ಕಾರ್ಯಕ್ರಮ ಸೆ.21 ರಂದು ನಡೆಯಲಿದೆ.

Related posts

ಸುರ್ಯ ದೇವಸ್ಥಾನ: ದೇವದಾಸ್ ಕಾಪಿಕಾಡ್ ಹಾಗೂ ಶ್ರೀನಿವಾಸ ಹೆಬ್ಬಾರ್‌ರಿಗೆ ಸನ್ಮಾನ

Suddi Udaya

ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿದ ನಾಮಫಲಕದಲ್ಲಿ ಯಡವಟ್ಟು: ಕೂಡಲೇ ಸರಿಪಡಿಸುವಂತೆ ಆಗ್ರಹ

Suddi Udaya

ಮೇ 21 : ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ಉತ್ತರಕ್ರಿಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿಗೆ

Suddi Udaya

ಕಲ್ಮಂಜ: 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ

Suddi Udaya

ಬೆಳ್ತಂಗಡಿಯ ಶ್ರೀರಾಘವೇಂದ್ರ ಮಠದಲ್ಲಿ ಬ್ರಹ್ಮಕಲಶೋತ್ಸವ : ಧಾರ್ಮಿಕ ಸಭೆ

Suddi Udaya

ಸುಲ್ಕೇರಿಮೊಗ್ರು ಹೊಸಮನೆ ನಿವಾಸಿ ನೀಲಮ್ಮ ನಿಧನ

Suddi Udaya
error: Content is protected !!