24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ದೊಂಪದಪಲ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ

ಉಜಿರೆ : ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಬೆಳ್ತಂಗಡಿ,ಸಮೂಹ ಸಂಪನ್ಮೂಲ ಕೇಂದ್ರ ಹಳೆಪೇಟೆ- ಉಜಿರೆ ವಲಯದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಇತ್ತೀಚೆಗೆ ಸಹಿಪ್ರಾಶಾಲೆ ದೊಂಪದಪಲ್ಕೆ ಇಲ್ಲಿ ನಡೆಯಿತು.

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಉಷಾ ಕಿರಣ್ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಳೆದು ಪೋಷಿಸಲು ಇದು ಸೂಕ್ತವಾದ ವೇದಿಕೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಇವರು ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಶಿಕಲಾ ಹಾಗೂ ದಿನೇಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಕೆ.ಡಿ.ಆರ್.ಡಿ.ಪಿ (R) ಇಲ್ಲಿಯ ನಿವೃತ್ತ ಯೋಜನಾಧಿಕಾರಿಗಳು ಹಾಗೂ ಪ್ರತಿಭಾ ಕಾರಂಜಿ ಸಮಿತಿಯ ಸಂಚಾಲಕ ಸೀತಾರಾಮ್ ಶೆಟ್ಟಿ ಮಾತನಾಡಿ”ಮಕ್ಕಳ ಪ್ರತಿಭೆಯೇ ಅವರ ಶಕ್ತಿ. ಅದನ್ನು ಪೋಷಿಸುವುದು ನಮ್ಮ ಕರ್ತವ್ಯ “ಎಂದು ಹೇಳಿದರು. ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಶಾಲೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಾ ಕೇಸರಿ, ಸಮನ್ವಯ ಅಧಿಕಾರಿ ಮೋಹನ್ ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭವನ್ನು ಹಾರೈಸಿದರು. ಗುರುದೇವ ಕಾಲೇಜು ಬೆಳ್ತಂಗಡಿ ಇಲ್ಲಿಯ ಉಪ ಪ್ರಾಂಶುಪಾಲರಾದ ಶ ಶಮಿವುಲ್ಲಾ ಬೆಳ್ತಂಗಡಿ ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿಯವರಾದ ಸುರೇಶ್ ಮಾಚಾರ್, ಪ್ರತಿನಿಧಿ ಶ್ರೀಮತಿ ಜ್ಯೋತಿ ಇವರು ಉಪಸ್ಥಿತರಿದ್ದರು.

ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪ್ರತಿಮಾ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿವಿಧ ಸ್ಪರ್ಧೆಗಳು ಸುಲಲಿತವಾಗಿ ನಡೆದು ವಿಜೇತರಿಗೆ ಶ್ರೀಮತಿ ಸೇವಂತಿ, ಶಿಕ್ಷಕಿ ಮುಂಡತ್ತೋಡಿ ಅವರ ನೇತೃತ್ವಲ್ಲಿ ಶಾಲಾ ಎಸ್‌ಡಿಎಂಸಿಯವರು ಬಹುಮಾನ ನೀಡಿ ಪುರಸ್ಕರಿಸಿದರು. ಗುರುದೇವ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಈ ದಿನದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಸುರೇಶ್ ಆಚಾರ್ ಎಲ್ಲರನ್ನು ಸ್ವಾಗತಿಸಿ ಶ್ರೀಮತಿ ನಿರ್ಮಲ ಸಹಶಿಕ್ಷಕರು ವಂದಿಸಿದರು. ಶಿಕ್ಷಕಿ ಶ್ರೀಮತಿ ಸೌಮ್ಯ ನಾಯಕ್ ನಿರೂಪಿಸಿದರು.

Related posts

ಬೆಳಾಲಿನಲ್ಲಿ ಅಕ್ರಮ ಮದ್ಯ ದಾಸ್ತಾನು ಘಟಕಕ್ಕೆ ಅಬಕಾರಿ ದಾಳಿ: ಆರೋಪಿ ದಯಾನಂದ ಸಹಿತ ರೂ.45 ಸಾವಿರ ಮೌಲ್ಯದ ಮದ್ಯ ವಶಕ್ಕೆ

Suddi Udaya

ಮಡಂತ್ಯಾರು: ‘ನೇತ್ರ ವೈದ್ಯರ ನಡೆ ಗ್ರಾಮ ಪಂಚಾಯತ್ ಕಡೆ’ ಯೋಜನಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಅರಸಿನಮಕ್ಕಿ: ಅರೇಕಲ್ ಮಹಾದೇವ ಭಟ್ ರವರ ತೋಟಕ್ಕೆ ಕಾಡಾನೆ ದಾಳಿ

Suddi Udaya

ಇಂದಬೆಟ್ಟು: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರಿಂದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಭೆ

Suddi Udaya

ಕೂಟ ಮಹಾಜಗತ್ತು ಬೆಳ್ತಂಗಡಿ ವತಿಯಿಂದ ಮಕರ ಸಂಕ್ರಾಂತಿ ಆಚರಣೆ ಮತ್ತು ಅಭಿನಂದನಾ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ: ಎರಡನೇ ಬಾರಿಗೆ ಚುನಾಯಿತರಾಗಿರುವ ಶಾಸಕ ಹರೀಶ್ ಪೂಂಜರವರಿಗೆ ಕಾರ್ಯಕರ್ತರಿಂದ ಅಭಿನಂದನೆ ಮತ್ತು ಚುನಾವಣಾ ಅವಲೋಕನ ಸಭೆ

Suddi Udaya
error: Content is protected !!