ಉಜಿರೆ: ಅಸೋಸಿಯೇಷನ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಬೆಳ್ತಂಗಡಿ- ಪುತ್ತೂರು ಸೆಂಟರ್ ವತಿಯಿಂದ ಇಂಜಿನಿಯರ್ಸ್ ದಿನ ಆಚರಣೆ ಸಂಭ್ರಮ-2024 ಒಷಿಯನ್ ಪರ್ಲ್ ಹೋಟೇಲ್ ನ ಸಭಾಂಗಣದಲ್ಲಿ ಸೆ.19 ರಂದು ನಡೆಯಿತು.
ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಸಿಂಹ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಗತ್ತಿನ ಮುಂದೆ ಭಾರತ ಬಹಳ ದೊಡ್ಡ ದೇಶವಾಗಿ ಬೆಳೆಯುತ್ತಿದೆ.ಭಾರತದ ಸಾಧನೆ,ಬೆಳವಣಿಗೆ,ಪ್ರಗತಿಯ ಹಿಂದೆ ಇಂಜಿನಿಯರ್ಸ್ ಗಳ ಕೊಡುಗೆ ಅಪಾರ ಎಂದು ಹೇಳಿದರು.
ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ ಪಡೆದ ಸಂಪತ್ ರತ್ನ ರಾವ್,ಸುಭಾಶ್ಚಂದ್ರ, ಚೆಯರ್ ಮೆನ್ ಜಗದೀಶ್ ಪ್ರಸಾದ್ ಹಾಗೂ ಹಲವಾರು ಇಂಜಿನಿಯರ್ಸ್ ಸಾಧಕರನ್ನು, ಸಹಕಾರ ನೀಡಿದ ಮಹನೀಯರನ್ನು ಗೌರವಿಸಲಾಯಿತು.
ಕೆಪಿಸಿಇಎ ಇದರ ಅಧ್ಯಕ್ಷ ಶ್ರೀಕಾಂತ್ ಎಸ್, ಕಾರ್ಯದರ್ಶಿ ಅಜಿತ್ ಕುಮಾರ್ ಎಸ್.ಎಂ,ಸ್ಥಾಪಕ ಸದಸ್ಯ ಎಂ.ಆರ್ ಕಲ್ಗಲ್,ಡಾ.ಅಶ್ವಥ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಬೆಳ್ತಂಗಡಿ ಇದರ ಅಧ್ಯಕ್ಷ ಜಗದೀಶ್ ಪ್ರಸಾದ್ ಎನ್ ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್,ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಶೋಕ್ ಕುಮಾರ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.ಕಾರ್ಯದರ್ಶಿ ಚೇತನ್ ಎಸ್,ಕೋಶಾಧಿಕಾರಿ ಕೇಶವ ಹಾಗೂ ನಾಗೇಶ್ ಎಂ,ಪ್ರಮೋದ್,ಸಿಜೋ ಜೋಸೆಫ್, ನಿತಿನ್ ಬಿ ಹಾಗೂ ಸದಸ್ಯರು ಸಹಕರಿಸಿದರು.ಚೈತ್ರಾ ಭಾರಧ್ವಾಜ್ ಪ್ರಾರ್ಥನೆ ಹಾಡಿದರು.