September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಮಸ್ಯೆ

ಅಭಿವೃದ್ಧಿ ಕಾಮಗಾರಿಗೆ ತಡೆ ಆರೋಪ: ಇಳಂತಿಲದಲ್ಲಿ ಬೃಹತ್ ಪ್ರತಿಭಟನೆ

ಇಳಂತಿಲ: ಅಭಿವೃದ್ಧಿ ಕಾಮಗಾರಿ ಆರಂಭಿಸಿದ ಹಂತದಲ್ಲಿಯೇ ರಾಜ್ಯ ಸರಕಾರ ಕಾಮಗಾರಿಗೆ ತಡೆ ನೀಡಿದೆ ಎಂದು ಆರೋಪಿಸಿ ಇಳಂತಿಲ ಗ್ರಾಮದ ಕಂಗಿನಾರುಬೆಟ್ಟಿನಲ್ಲಿ ನ.27ರಂದು ಪ್ರತಿಭಟನೆ ನಡೆಯಿತು.

ಈ ಹಿಂದಿನ ಬಿಜೆಪಿ ಸರಕಾರ ಅವಧಿಯಲ್ಲಿ ಬನ್ನೆಂಗಳದಿಂದ ಕಂಗಿನಾರುಬೆಟ್ಟು ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿತ್ತು. ಆದರೆ ಚುನಾವಣೆ ಬಳಿಕ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೆ ಈ ಕಾಮಗಾರಿಯನ್ನು ತಡೆಹಿಡಿದಿರುವುದು ಅಲ್ಲಿನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಬಿಜೆಪಿ ಪ್ರಮುಖರಾದ ನ್ಯಾಯವಾದಿ ಅಗರ್ತ ಸುಬ್ರಹ್ಮಣ್ಯ ಕುಮಾರ್‌ ಮಾತನಾಡಿ, ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಗೆ ಬಿಜೆಪಿ ಸರಕಾರ ಕೊನೆಗಳಿಗೆಯಲ್ಲಿ ಅನುದಾನ ಬಿಡುಗಡೆಗೊಳಿಸಿತ್ತು. ಚುನಾವಣೆ ನೀತಿ ಸಂಹಿತೆಯ ಕಾರಣದಿಂದ ಕಾಮಗಾರಿ ಸ್ಥಗಿತಗೊಳಿಸಿದ್ದು, ಕಾಂಗ್ರೆಸ್ ಸರಕಾರ ರಾಜಕೀಯ ಮಾಡಿರುವುದು ಸರಿಯಲ್ಲ, ಅಭಿವೃದ್ಧಿಯಲ್ಲಿ ಸ್ಪಂದಿಸಲಿ. ಅಲ್ಲದೆ ಈ ಭಾಗದ ಜನರು ರಸ್ತೆಯಲ್ಲಿ ನಡೆಯಲಾಗದ ಆ ಸ್ಥಿತಿ ನಿರ್ಮಾಣವಾಗಿದ್ದು ಮುಂದಿನ 15 ದಿನಗಳ ಒಳಗೆ ಮತ್ತೆ ಕಾಮಗಾರಿ ನಡೆಸಲು ಅನುವು ಮಾಡಬೇಕು ಎಂದರು.

ಎ.ಪಿ.ಎಂ.ಸಿ. ಮಾಜಿ ಸದಸ್ಯ ಜಯನಂದ ಕಲ್ಲಾಪು ಮಾತನಾಡಿ, ತೀರಾ ಕೆಟ್ಟು ಹೋದ ರಸ್ತೆಯಲ್ಲಿ ಶಾಲಾ ಮಕ್ಕಳ ಸಹಿತ ವೃದ್ದರು ನಡೆದಾಡಲು ಅಸಾಧ್ಯವಾಗಿದೆ. ಅನುದಾನ ಬಿಡುಗಡೆಗೊಳಿಸಿ ಗುತ್ತಿಗೆದಾರರು ರಸ್ತೆಗೆ ಜಲ್ಲಿಕಲ್ಲು ಹಾಸಿದ ಬೆನ್ನಲ್ಲೆ ಕಾಮಗಾರಿ ತಡೆ ಹಿಡಿದಿರುವುದು ವಿಷಾದನೀಯ. ಈ ಕುರಿತು ಶಾಸಕರನ್ನು ಸಂಪರ್ಕಿಸಿ ಮನವರಿಕೆ ಮಾಡುವ ಭರವಸೆ ನೀಡಿದರು.

ಗ್ರಾ.ಪಂ.ದ ಅಧ್ಯಕ್ಷ ತಿಮ್ಮಪ್ಪಗೌಡ ಮಾತನಾಡಿದರು. ತಮ್ಮ 5 ಮನವಿಯನ್ನು ತತ್ ಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ವಸಂತ, ರಾಜೇಶ, ಮಂಜುನಾಥ, ಜಯಂತ, ರಾಘವೇಂದ್ರ, ನಾಗರಾಜ, ಪುರುಷೋತ್ತಮ, ರವಿಚಂದ್ರ, ಧನಂಜಯ, ಯತೀಶ, ಆನಂದ, ಬೇಬಿ, ಉಗ್ಗಪ್ಪ ಉಪಸ್ಥಿತರಿದ್ದರು.

ಉಪ್ಪಿನಂಗಡಿ ಪೊಲೀಸರು ಬಂದೋಬಸ್ತ್ ನಡೆಸಿದ್ದರು.

Related posts

ಗೇರುಕಟ್ಟೆ: ಹಿದಾಯ ತುಸ್ಸಿಬಿಯಾನ್ ಮದರಸದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದರಸ ಮಕ್ಕಳ ಕಲಾ ಕಲರವ ಕಾರ್ಯಕ್ರಮ “ಎಂಬ್ರೆಝ್ ಮದೀನಾ”

Suddi Udaya

ಕುಕ್ಕೇಡಿ: ಮಡಿಲೊಟ್ಟು ನಿವಾಸಿ ಲಿಂಗಮ್ಮ ದೇವಾಡಿಗ ನಿಧನ

Suddi Udaya

ಕರಿಮಣೇಲು ನಿವಾಸಿ ಶ್ರೀಮತಿ ಶಾಂತ ನಿಧನ

Suddi Udaya

ಬಿ.ವಿ.ಎಫ್. ಬೆಳ್ತಂಗಡಿ ತಾ. ಘಟಕದಿಂದ ’ಭಾರತೀಯ ಸಂವಿಧಾನ ದಿನಾಚರಣೆ’

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಯುವ ಹೆಚ್.ಪಿ.ವಿ ವ್ಯಾಕ್ಷಿನೇಷನ್ ಲಸಿಕಾ ಶಿಬಿರ

Suddi Udaya

ಉಜಿರೆ ರುಡ್‌ ಸೆಟ್ ಸಂಸ್ಥೆಯಲ್ಲಿ ವಿಶೇಷ ಸಂವಾದ ಕಾರ್ಯಕ್ರಮ

Suddi Udaya
error: Content is protected !!