ಬೆಳ್ತಂಗಡಿ; ತಾಲೂಕು ಜನಜಾಗೃತಿ ವೇದಿಕೆ ಸ್ಥಾಪನೆಯಾಗಿರುವ ಮಾತೃ ತಾಲೂಕಾಗಿರುವ ಬೆಳ್ತಂಗಡಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ಕಾರ್ಯಕ್ರಮಕ್ಕೆ ಅದರದ್ದೇ ಆದ ಮಹತ್ವ ಇದೆ. ಆ ಹಿನ್ನೆಲೆಯಲ್ಲಿ ಮದ್ಯಮುಕ್ತ ಸಮಾಜದ ಕಲ್ಪನೆ ಹೊಂದಿದ್ದ ಮಹಾತ್ಮಾ ಗಾಂಧೀಜಿಯವರ ಜನ್ಮ ಜಯಂತಿಯ ಕಾರ್ಯಕ್ರಮವನ್ನು ಅ.2ರಂದು ಬೆಳ್ತಂಗಡಿ ಎಸ್.ಡಿ.ಎಂ ಕಲಾಭವನದಲ್ಲಿ ಅದ್ದೂರಿಯಾಗಿ ನಡೆಸುವುದೆಂದು ಸರ್ವ ಸಮ್ಮತ ತೀರ್ಮಾನಕ್ಕೆ ಬರಲಾಯಿತು.
ಬೆಳ್ತಂಗಡಿ ಪಿನಾಕಿ ಸಭಾಂಗಣದಲ್ಲಿ ಸೆ.19ರಂದು ನಡೆದ ತಾ. ಜನಜಾಗೃತಿ ವೇದಿಕೆ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ ವಹಿಸಿದ್ದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮಾತನಾಡಿ ಸೂಕ್ತ ಮಾರ್ಗದರ್ಶನ ನೀಡಿದರು.
ಸಮಾವೇಶವನ್ನು ಸರ್ವಧರ್ಮೀಯ ಪ್ರತಿನಿಧಿಗಳನ್ನು ಆಹ್ವಾನಿಸಿ ವಿಶೇಷ ರೀತಿಯಲ್ಲಿ ನಡೆಸುವುದೆಂದು ನಿರ್ಧಾರಕ್ಕೆ ಬರಲಾಯಿತು. ವಲಯವಾರು ತಲಾ 100 ಜನರಂತೆ 19 ವಲಯಗಳಿಂದ ಪ್ರತಿನಿಧಿಗಳು ಭಾಗವಹಿಸುವುದೆಂದು ತೀರ್ಮಾನಿಸಲಾಯಿತು. ನವಜೀವನ ಸಮಿತಿ ಸದಸ್ಯರ ಸಂಘಟನೆ, ಪ್ರಗತಿ ಬಂಧು ಒಕ್ಕೂಟಗಳ ಜೊತೆ ಸಂವಹನ, ಗ್ರಾ. ಯೋಜನೆಯ ಪೂರಕ ಎಲ್ಲಾ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ಮೂಡಿಸವುದು, ಭಜನಾ ಕಮ್ಮಟ ಯಶಸ್ವಿ, ಶೌರ್ಯ ವಿಪತ್ತುತಂಡದ ವ್ಯವಸ್ಥೆ, ಇತ್ಯಾಧಿಯಾಗಿ ಕ್ಷೇತ್ರದ ಸಾಮಾಜಿಕವಾದ ಚಲವಳಿಗಳನ್ನು ಬಲಗೊಳಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರುಗಳಾದ ಕಿಶೋರ್ ಹೆಗ್ಡೆ ಕರಂಬಾರು, ಡಿ.ಎ ರಹಿಮಾನ್ ಕಕ್ಕಿಂಜೆ, ಬೆಳಾಲು ತಿಮ್ಮಪ್ಪ ಗೌಡ ಮತ್ತು ಶಾರದಾ ಆರ್ ರೈ ಹಾಗೂ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಸೀತಾರಾಮ ಬೆಳ್ತಂಗಡಿ ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಿಸ್ ಅವರು ಗಾಂಧಿ ಜಯಂತಿ ಕಾರ್ಯಕ್ರಮದ ಕಾರ್ಯಯೋಜನೆ ವಿವರಿಸಿದರು.
ಸಾಮೂಹಿಕ ಧ್ಯೇಯ ಗೀತೆಯೊಂದಿಗೆ ಸಭೆ ಆರಂಭವಾಯಿತು. ಬೆಳ್ತಂಗಡಿ ಯೋಜನಾ ಕಚೇರಿ ವ್ಯಾಪ್ತಿಯ ಯೋಜನಾಧಿಕಾರಿ
ಸುರೇಂದ್ರ ಸ್ವಾಗತಿಸಿದರು.
ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಯೋಜನಾಧಿಕಾರಿ ದಯಾನಂದ ಗತ ಸಭೆಯ ವರದಿ ಮಂಡಿಸಿದರು. ಬೆಳ್ತಂಗಡಿ ವ್ಯಾಪ್ತಿಯ ವಲಯವಾರು ಪ್ರಗತಿ ವರದಿಯನ್ನು ಹರೀಶ್
ವಾಚಿಸಿದರೆ, ಗುರುವಾಯನಕೆರೆ ವ್ಯಾಪ್ತಿಯ ವಲಯವಾರು ಪ್ರಗತಿ ವರದಿಯನ್ನು ಶಿವಾನಂದ ವಾಚಿಸಿದರು.
ಮಡಂತ್ಯಾರು ವಲಯದ ಮೇಲ್ವಿಚಾರಕ ವಸಂತ ಕಾರ್ಯಕ್ರಮ
ನಿರೂಪಿಸಿದರು. ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ವಂದಿಸಿದರು.
ತಲಾ 25 ಸಾವಿರ ರೂ.ಗಳ ಚೆಕ್ ಹಸ್ತಾಂತರ;
ಪ್ರಾಕೃತಿಕ ವಿಕೋಪ ಸಂತ್ರಸ್ತೆಯಾಗಿದ್ದ ಇಂದಬೆಟ್ಟು ದೇವನಾರಿಯ ಸಕೀನಾ ಅವರಿಗೆ ಹಾಗೂ ವಿದ್ಯುತ್ ಸಂಪರ್ಕ ಇಲ್ಲದೆ ಸಂಕಷ್ಟದಲ್ಲಿರುವ ಪೂಜಾ ಇಂದಬೆಟ್ಟು ಈ ಎರಡು ಕುಟುಂಬಗಳಿಗೆ ವೀರೇಂದ್ರ ಹೆಗ್ಗಡೆಯವರು ಮಂಜೂರುಗೊಳಿಸಿದ ತಲಾ 25 ಸಾವಿರ ರೂ. ಗಳ ಸಾಂತ್ವನ ನಿಧಿ ಚೆಕ್ಅನ್ನು ಸಭೆಯಲ್ಲಿ ಹಸ್ತಾಂತರಿಸಲಾಯಿತು.