ಧರ್ಮಸ್ಥಳ :ಇಲ್ಲಿಯ ಅಶೋಕನಗರದ ಹಿರಿಯ ಜೀವ
ನಾಟಿ ವೈದ್ಯರೆಂದೇ ಪ್ರಸಿದ್ಧರಾದ,ಐದನೇಯ ತಲೆಮಾರಾದ ಶತಾಯುಷಿ 110 ವರ್ಷ ವಯಸ್ಸಿನ ಶ್ರೀಮತಿ ನೊಕ್ಕೆ ಅಜ್ಜಿ ರವರು ವಯೋಸಹಜವಾಗಿ ಸೆ. 19ರಂದು ಸಂಜೆ ದೈವಾಧೀನರಾದರು.
ಮೃತರು ಮಕ್ಕಳು, ಮೊಮ್ಮಕ್ಕಳು,ಮರಿಮೊಮ್ಮಕ್ಕಳು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಅವರು ತಮ್ಮ ಜೀವಿತಾವಧಿಯಲ್ಲಿ ಸುಮಾರು 700 ಕ್ಕೂ ಅಧಿಕ ಹೆರಿಗೆಗಳನ್ನು ಸುಸೂತ್ರವಾಗಿ ನೆರವೇರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೆ ಸುತ್ತಮುತ್ತಲ ಪರಿಸರದವರಿಗೆ ಸಣ್ಣಪುಟ್ಟ ಖಾಯಿಲೆಗಳಿಗೆ ನಾಟಿ ಮದ್ದು ಕೊಟ್ಟು ವಾಸಿ ಮಾಡುತಿದ್ದರು.
ತಲೆನೋವಿನ ಮದ್ದಿಗಾಗಿ ಪರವೂರಿನ ಜನರು ಕೂಡ ಇವರನ್ನು ಅರಸಿಕೊಂಡು ಬರುತ್ತಿದ್ದರು.ತಮಗೆ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಯಾವುದೇ ವೈದ್ಯರಿಗೆ ಕಡಿಮೆ ಇಲ್ಲದಂತೆ ಓರ್ವ ಪ್ರಸೂತಿ ತಜ್ಞೆಯಾಗಿ, ನಾಟಿ ವೈದ್ಯೆಯಾಗಿ ಊರಿನಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರು. ಅಲ್ಲದೆ ತುಳು ಸಂಧಿ – ಪಾಡ್ದನ ಹಾಡುವುದರಲ್ಲೂ ಇವರು ನಿಸ್ಸೀಮರಾಗಿದ್ದರು.
ಇವರು ಈ ಸಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದರು.