25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

ಉರುವಾಲು: ಇಲ್ಲಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸೆ.20 ರಂದು ಪುಂಜಾಲಕಟ್ಟೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ನಡೆಯಿತು. ಈ ಸ್ಪರ್ಧೆಗಳಲ್ಲಿ ಸರಿ ಸುಮಾರು 30 ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.


ಕಾರ್ಯಕ್ರಮದ ಉದ್ಘಾಟನೆಯನ್ನು ಉಪ್ಪಿನಂಗಡಿ ಮಹಾಮಂಡಲದ ಅಧ್ಯಕ್ಷ ಈಶ್ವರ ಪ್ರಸನ್ನ ಪರ್ನೆಕೊಡಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಪ್ರತಿಭಾ ಕಾರಂಜಿಯ ನೋಡಲ್ ಅಧಿಕಾರಿ ಶ್ರೀಮತಿ ಚೇತನಾಕ್ಷಿ , ಕುಪ್ಪೆಟ್ಟಿ ಕ್ಲಸ್ಟರ್ ಸಿಆರ್‍ ಪಿ ವಾರಿಜಾ, ಪುತ್ತಿಲ ಕ್ಲಸ್ಟರ್ ನ ಸಿ ಆರ್ ಪಿ ದಿನೇಶ್, ಕರಾಯ ಕ್ಲಸ್ಟರ್ ನ ಸಿ ಆರ್ ಪಿ ಮೊಹಮ್ಮದ್ ಶರೀಫ್, ಕೋರಿಂಜ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ಯೋಗೀಶ್ ಕಡ್ತಿಲ, ಉರುವಾಲು ಮಸೀದಿ ಅಧ್ಯಕ್ಷರು ಹಮೀದ್, ಉರುವಾಲು ವಲಯಾಧ್ಯಕ್ಷ ಕೃಷ್ಣ ಭಟ್, ಅನುದಾನಿತ ಶಾಲಾ ಮುಖ್ಯ ಶಿಕ್ಷಕ ಸಣ್ಣಪ್ಪ ಉಪಸ್ಥಿತರಿದ್ದರು.

ಆಗಮಿಸಿದ ಸರ್ವ ಗಣ್ಯರನ್ನು , ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿ ಶಿಕ್ಷಕರನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಿತ ಕೆ ಆರ್ ಸ್ವಾಗತಿಸಿದರು. ಶ್ರೀಮತಿ ಚೇತನಾಕ್ಷಿ ಪ್ರಾಸ್ತಾವಿಕ ನುಡಿದರು.ಸೇವಾ ಸಮಿತಿಯ ಸದಸ್ಯರಾದ ಸತ್ಯ ಶಂಕರ್ ಭಟ್ ಕಾರ್ಯಕ್ರಮದ ವ್ಯವಸ್ಥೆಗಳ ಬಗ್ಗೆ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು. ಸಹ ಶಿಕ್ಷಕಿ ಸೌಮ್ಯ ಇವರು ಧನ್ಯವಾದವಿತ್ತರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಮಂಜು ಗಣೇಶ್ ಹಾಗು ದಿವ್ಯಾ ಶೆಟ್ಟಿ ನೆರವೇರಿಸಿದರು.

Related posts

ಬೆಳ್ತಂಗಡಿ ಕೋಟಕ್ ಲೈಫ್ ಕಚೇರಿಯಲ್ಲಿ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ‍ರವರಿಗೆ ಸನ್ಮಾನ

Suddi Udaya

ಕುವೆಟ್ಟು ಸ. ಉ. ಪ್ರಾ. ಶಾಲೆಯ ಅಡುಗೆ ಕೋಣೆಯ ವಿಸ್ತೃತ ಕೊಠಡಿ ಉದ್ಘಾಟನೆ

Suddi Udaya

ನಿಡ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥ

Suddi Udaya

ಶ್ರೀ ರಾಮ ಮಂದಿರದ ಹನುಮ ರಥಕ್ಕೆ ಸ್ವಾಗತ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣೆ, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರಿಂದ ಮತದಾನ

Suddi Udaya

ಲಾಯಿಲ: ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!