ಬೆಳ್ತಂಗಡಿ: ವಾಣಿ ಸೌಹಾರ್ದ
ಕೋ ಆಪರೇಟಿವ್ ಸೊಸೈಟಿ ಮಹಾಸಭೆಯು ಸೆ.22ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡ ರವರ
ಆಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರು ಮಾತನಾಡಿ 2023-24 ಸಾಲಿನಲ್ಲಿ
58.35 ವ್ಯವಹಾರ ನಡೆಸಿ, ರೂ. 44.45 ಲಕ್ಷ ಲಾಭ ಗಳಿಸಿದ್ದು, ಶೇ.10ಡಿವಿಡೆಂಟ್ ನೀಡಲಾಯಿತು.
ಬರುವ ವರ್ಷ ಇನ್ನು ಹೆಚ್ಚು ಡಿವಿಡೆಂಟು ನೀಡಲಾಗುವುದು. ಬೆಳ್ತಂಗಡಿ ಸೊಸೈಟಿ ಆರಂಭವಾಗಿ ಎರಡುವರೆ ವರ್ಷದಲ್ಲಿ ಸೋಮಂದಡ್ಕದಲ್ಲಿ ಶಾಖೆ ಪ್ರಾರಂಭಿಸಿದ್ದೇವೆ. ಲಾಭದಲ್ಲಿದೆ.
2ನೇ ಶಾಖೆ ಶೀಘ್ರದಲ್ಲಿ ಕಲ್ಲೇರಿಯಲ್ಲಿ ಪ್ರಾರಂಭವಾಗಲಿದೆ.
3ನೇ ಶಾಖೆ ಕೊಕ್ಕಡದಲ್ಲಿ ಪ್ರಾರಂಭಿಸುವ ಚಿಂತನೆ ಇದೆ.
ನಮ್ಮಲ್ಲಿ 3671 ಸದಸ್ಯರಿದ್ದು. 14 ಕೋಟಿಗಿಂತ ಹೆಚ್ಚು ಸಾಲ ಕೊಟ್ಟಿದ್ದು. 13.65 ಕೋಟಿ ಠೇವಣಿ ಇದ್ದು. 25 ಕೋಟಿ ಡೆಪಾಸಿಟ್ ಗುರಿ ಇತ್ತು. ಕಾರಂತರಗಳಿಂದ ಸಾಧ್ಯವಾಗಲಿಲ್ಲ.. ನಮ್ಮ ಸೊಸೈಟಿ ಸದೃಢವಾಗಿದೆ ಎಂದರು.
. ವಾರ್ಷಿಕ ಲೆಕ್ಕ ಪತ್ರವನ್ನು
ಮುಖ್ಯ ಕಾರ್ಯನಿರ್ವಣಾಧಿಕಾರಿ ಧನಂಜಯ ಕುಮಾರ್ ವಂಡಿಸಿದರು .
ನಿರ್ದೇಶಕರಾದ , ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ಸವಣಲು. ಗೋಪಾಲಕೃಷ್ಣ ಗುಲ್ಲೋಡಿ, ಮಾಧವ ಗೌಡ. ಶ್ರೀನಾಥ್ ಕೆ. ಎಮ್. ಸುರೇಶ್ ಕೌಡಂಗೆ, ಯಶವಂತ್ ಬಾನಂದೂರು,ಪುರಂದರ ಗೌಡ..ಶ್ರೀಮತಿ ಉಷಾ ಕಿನ್ನಾಜೆ, ಶ್ರೀಮತಿ ಭವಾನಿ ಗೌಡ, ಸುನಿಲ್ ಅಣವು. ನಿಕಟ್ಟ ಪೂರ್ವ ನಿರ್ದೇಶಕರಾದ ಸೋಮೇಗೌಡ. ಗೋಪಾಲಕೃಷ್ಣ ಜಿ ಕೆ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಕುಶಾಲಪ್ಪ ಗೌಡ ಸ್ವಾಗತಿಸಿ, ಸೋಮಂತಡ್ಡ ಶಾಖೆಯ ಉಮೇಶ್ ಗೌಡ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ
ಭವಾನಿ ಕಾಂತಪ್ಪಗೌಡ ಧನ್ಯವಾದವಿತ್ತರು.