30.5 C
ಪುತ್ತೂರು, ಬೆಳ್ತಂಗಡಿ
April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರಿನಲ್ಲಿ ಭದ್ರಾ ಹೋಮ್ ಅಪ್ಲಾಯನ್ಸಸ್ ಮೂರನೇ ಶಾಖೆ ಶುಭಾರಂಭ

ಮಡಂತ್ಯಾರು: ಭದ್ರಾ ಎಲೆಕ್ಟ್ರಾನಿಕ್ಸ್ ನ ಮೂರನೇ ಶಾಖೆಯು ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಪರಿಶ್ರಮ ಕಟ್ಟಡದಲ್ಲಿ ಸೆ.23 ರಂದು ಶುಭಾರಂಭಗೊಂಡಿದೆ.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ||ಎಂ.ಎನ್. ರಾಜೇಂದ್ರ ಕುಮಾ‌ರ್ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕೊಳ್ಪೆದಬೈಲು ಮೊಹಿಯುದ್ದೀನ್ ಜಾಮಿಯಾ ಮಸ್ಜಿದ್ ಅಧ್ಯಕ್ಷ ಹಾಜಿ| ಅಬ್ದುಲ್ ಲತೀಫ್ ಸಾಹೇಬ್, ಪಾರೆಂಕಿ ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಪೇಜಾವರ ಟಿ.ವಿ ಶ್ರೀಧರ್ ರಾವ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ. ಸ್ವಾಮಿ ಡಾ. ಸ್ಟ್ಯಾನಿ ಗೋವಿಯಸ್,ಮಡಂತ್ಯಾರ್ ಸಿಎ ಬ್ಯಾಂಕಿನ ಉಪಾಧ್ಯಕ್ಷೆ ಧನಲಕ್ಷ್ಮಿ ,ಮಾಲಾಡಿ ಗ್ರಾ.ಪಂ ಅಧ್ಯಕ್ಷ ಪುನೀತ್ ಕುಮಾರ್ ಹಾಗೂ ಸಿ.ಎ ಬ್ಯಾಂಕ್ ನ ನಿರ್ದೇಶಕರು ಉಪಸ್ಥಿತರಿದ್ದರು.

ಬಂಟ್ವಾಳ ಅಗ್ನಿಶಾಮಕ ಠಾಣೆಯ ಎದುರು ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಭದ್ರಾ ಗ್ಯಾಸ್ ಮತ್ತು ಹೋಮ್ ಅಪ್ಲಾಯನಸ್, ಬಿ.ಸಿ. ರೋಡ್ ಸರಕಾರಿ ಬಸ್ ನಿಲ್ದಾಣ, ಸೋಮಯಾಜಿ ಆಸ್ಪತ್ರೆ ಎದುರಿನಲ್ಲಿ ಶಾಖೆ ಹೊಂದಿದೆ.

ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಆಡಳಿತ ನಿರ್ದೇಶಕ ಮಂಜುನಾಥ ಆಚಾರ್ಯ ಮತ್ತು ಮೇಘಾ ಎಂ. ಆಚಾರ್ಯ ಸ್ವಾಗತಿಸಿ,ಸತ್ಕರಿಸಿದರು.

ಮಡಂತ್ಯಾರಿನ ಮಳಿಗೆಯಲ್ಲಿ ಮನೆಗೆ ಬೇಕಾದ ಎಲ್ಲ ರೀತಿಯ ಗೃಹೋತ್ಪನ್ನ ವಸ್ತುಗಳಾದ ಟಿ.ವಿ., ಫ್ರಿಡ್ಜ್, ವಾಷಿಂಗ್ ಮೆಷಿನ್, ಎ.ಸಿ., ಮಿಕ್ಸಿ, ಗೈಂಡರ್ ಸಹಿತ ಎಲ್ಲ ಹೋಮ್ ಅಪ್ಲಾಯನ್ಸಸ್ ಲಭ್ಯವಿದೆ ಎಂದು ಮಾಲಕರು ತಿಳಿಸಿದರು.

Related posts

ಕಂಬಳ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅನುಮತಿ

Suddi Udaya

ಬೆಳ್ತಂಗಡಿ ಜೆಸಿಐ ಮಂಜುಶ್ರೀ ಮಹಿಳಾ ವಿಭಾಗದಿಂದ ಮೆಡಿಕಲ್ ಕ್ಯಾಂಪ್

Suddi Udaya

ಸೆ.12-13: ಸೌಜನ್ಯ ಅತ್ಯಾಚಾರ ಪ್ರಕರಣ ಆರೋಪಿಗಳ ಪತ್ತೆಗೆ ಆಗ್ರಹಿಸಿ ಒಕ್ಕಲಿಗರ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಧರಣಿ

Suddi Udaya

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿ ನಾಪತ್ತೆ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ವರ್ಷಾವಧಿ ಜಾತ್ರಾ ಮಹೋತ್ಸವ: ಹಸಿರು ಹೊರೆಕಾಣಿಕೆ, ಧ್ವಜಾರೋಹಣ

Suddi Udaya

ವೇಣೂರು: ಕುಂಭಶ್ರೀ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಘಟಕಗಳಿಗೆ ಭೇಟಿ

Suddi Udaya
error: Content is protected !!