ಬೆಳ್ತಂಗಡಿ: ತಾಲೂಕಿನ ಬೆದ್ರಬೆಟ್ಟು ರಿಫಾಯಿಯ್ಯಾ ಜುಮಾ ಮಸೀದಿ ಮತ್ತು ಮುರ್ಷೀದುಲ್ ಆನಾಮ್ ಯಂಗ್ ಮ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಪುಣ್ಯ ಪ್ರವಾದಿಯವರ ಜನ್ಮದಿನ ಅಂಗವಾಗಿ ಜಲ್ಸತುಲ್ ಜಮೀಲ್2024 ಪ್ರತಿಭಾ ಕಾರ್ಯಕ್ರಮ ಮಿಲಾದ್ ಆಚರಿಸಲಾಯಿತು. ಬೆದ್ರಬೆಟ್ಟು ಖತೀಬರಾದ ನೌಷಾದ್ ಸಖಾಫಿಯವರ ದುಆದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಮದ್ರಸ ವಿದ್ಯಾರ್ಥಿಗಳು ಮುಹಮ್ಮದ್ ಪೈಗಂಬರ್ (ಸ.ಅ )ರವರ ಚರಿತ್ರೆ, ಭಾಷಣ, ಮದಹ್ ಗೀತೆಗಳ ಮೂಲಕ ಈ ದಿನಕ್ಕೆ ಅರ್ಥ ಕಲ್ಪಿಸಿದರು. ಕಾರ್ಯಕ್ರಮದ ಕೊನೆಯ ಭಾಗವಾದ ಸಮಾರೋಪ ಸಮಾರಂಭ ವೇದಿಕೆಯನ್ನು ಬೆದ್ರಬೆಟ್ಟು ಆಡಳಿತ ಸಮಿತಿ ಅಧ್ಯಕ್ಷರಾದ ಸಲೀಂ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಕೇಂದ್ರ ಜುಮಾ ಮಸೀದಿ ಕಿಲ್ಲೂರು ಖತೀಬ್ ಸಂಶೀರ್ ಸಖಾಫಿ ಪರಪ್ಪು ಉದ್ಘಾಟನೆ ಮಾಡಿದರು, ಮುಖ್ಯ ಅತಿಥಿಯಾಗಿ ಆಗಮಿಸಿದ ಸಯ್ಯದ್ ಝೈನುಲ್ ಅಬಿದೀನ್ ತಂಙಲ್ ಕಾಜೂರು ಪ್ರಾಸ್ತಾವಿಕ ಭಾಷಣ ಮಾಡಿ ದುಃಹಾ ನೆರವೇರಿಸಿದರು.
ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೇಂದ್ರ ಜುಮಾ ಪದಾಧಿಕಾರಿಗಳು, ಪಿಚಲರ್,ಪೆರ್ದಾಡಿ,ಏರ್ಮಲ,ಧರ್ಮ ಗುರುಗಳು ಹಾಗು ಪದಾಧಿಕಾರಿಗಳು, ಬೆದ್ರಬೆಟ್ಟು ಮಸೀದಿ ಮಾಜಿ ಅಧ್ಯಕ್ಷರು ಹಸೈನಾರ್, ಮುರ್ಷೀದುಲ್ ಆನಾಮ್ ಯಂಗ್ ಮ್ಯಾನ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ಉದ್ಯಮಿ ಸತ್ತಾರ್ ಬಂಗಾಡಿ, ವಜೀರ್ ಬಂಗಾಡಿ, ಎಸ್.ಎಸ್.ಎಫ್ ಅಧ್ಯಕ್ಷರಾದ ನೌಫಲ್ ಹಾಶಿಮಿ , ಎಸ್.ವೈ.ಎಸ್ ಅಧ್ಯಕ್ಷರಾದ ಮಜೀದ್ ಗೋಲ್ಡನ್ ಫಿಶ್ ಮತ್ತು ಅಝರ್ ಮಿಸ್ಬಾಹಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಿನಾನ್ ಸಅದಿ ಸ್ವಾಗತಿಸಿ ಅಬ್ದುಲ್ ಖಾದರ್ ಸಅದಿ ನಿರೂಪಿಸಿದರು. ಮಧ್ಯಾಹ್ನ ಸಾಮೂಹಿಕ ಮಿಲಾದ್ ವಿಶೇಷ ಪ್ರಾರ್ಥನೆ ಸಾರ್ವಜನಿಕ ತುಪ್ಪದೂಟ ಮತ್ತು ಕಾರ್ಯಕ್ರಮ ಕೊನೆಯಲ್ಲಿ ತಬರ್ರುಕ್ ವಿತರಣೆ ಮಾಡಲಾಯಿತು