27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿ

ಗುರುವಾಯನಕೆರೆಯಲ್ಲಿ ನಿಲ್ಲಿಸಿದ ರೂ.68 ಸಾವಿರ ಮೌಲ್ಯದ ಮೋಟಾರ್ ಸೈಕಲ್ ಕಳವು

ಬೆಳ್ತಂಗಡಿ: ಗುರುವಾಯನಕೆರೆ ಎಂಬಲ್ಲಿರುವ ಶ್ರೇಷ್ಠ ಪೀಠೋಪಕರಣ ಅಂಗಡಿಯ ಪಕ್ಕದಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ನ್ನು ಯಾರೋ ಕಳವುಗೈದಿರುವ ಘಟನೆ ಸೆ.20 ರಂದು ನಡೆದಿದೆ.

ವೇಣೂರು ಕರಿಮಣೇಲು ನಿವಾಸಿ ಸಂತೋಷ್ ಕುಮಾರ್ ರವರು ಸೆ.20 ರಂದು ಮಧ್ಯಾಹ್ನ, ತನ್ನ ಬಾಬ್ತು ಕೆಎ 19 ಹೆಚ್ ಎಮ್ 3013 ನೇ ಬೈಕ್ (ಮೋಟಾರ್ ಸೈಕಲ್)ನ್ನು ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿರುವ ಶ್ರೇಷ್ಠ ಪೀಠೋಪಕರಣ ಅಂಗಡಿಯ ಪಕ್ಕದಲ್ಲಿ ನಿಲ್ಲಿಸಿ ಹೋಗಿದ್ದು, ಹಿಂತಿರುಗಿ ಸಂಜೆ ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಸಂತೋಷ್ ರವರು ಬಂದು ನೋಡಿದಾಗ ಅಂದಾಜು ರೂ 68,000/ ಮೌಲ್ಯದ ಮೋಟಾರ್ ಸೈಕಲ್ ನಾಪತ್ತೆಯಾಗಿದ್ದು,. ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ.

ಸದ್ರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾದ ಕ್ರಮಾಂಕ: 81/2024 ಕಲಂ: 303(1) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಎ.ಜೆ ಅಜೇಯ್ ಜೆಕೋಬ್ ಬೆಳ್ತಂಗಡಿ ಆಯ್ಕೆ

Suddi Udaya

ಮಲೆಬೆಟ್ಟು ಹಾ.ಉ. ಸಂಘದ ಆಡಳಿತ ಮಂಡಳಿಯನ್ನುವಜಾಗೊಳಿಸಿ ನೀಡಿದ ಆದೇಶ ರದ್ದು: ಮತ್ತೆ ಅಧಿಕಾರದ ಗದ್ದುಗೆಗೆ ಏರಿದ ಪ್ರಮೋದ್ ಕುಮಾರ್ ಅಧ್ಯಕ್ಷತೆಯ ಆಡಳಿತ ಮಂಡಳಿ

Suddi Udaya

ಕೊಕ್ಕಡ : ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ

Suddi Udaya

ಪಟ್ರಮೆ ಅನಾರು ಬೂತ್‌ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಭೇಟಿ

Suddi Udaya

ಕೊಯ್ಯೂರು: ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮ

Suddi Udaya

ಕಳಿಯ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya
error: Content is protected !!