ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ ಆಚರಣೆ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಹಿಂದಿ ಶಿಕ್ಷಕಿ ಶ್ರೀಮತಿ ಮಮತಾ ಎನ್ ಹೊಳ್ಳ ಆಗಮಿಸಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿಂದಿ ದಿವಸದ ಮಹತ್ವ, ಹಿಂದಿ ಭಾಷೆಯನ್ನು ಉಳಿಸಿ ಬೆಳೆಸುವುದು ಅದಕ್ಕೆ ನಮ್ಮೆಲ್ಲರ ಸಹಕಾರ ಮತ್ತು ಶ್ರಮ ಅಗತ್ಯವಿದೆ ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಹಿಂದಿ ಭಾಷಣ, ಹಿಂದಿ ಗೀತ ಗಾಯನ, ಹಿಂದಿ ಕಥೆ ರಚನೆಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹತ್ತನೇ ತರಗತಿಯ ಯಶಸ್ ಡಿ ನಿರೂಪಿಸಿದರು, 9ನೇ ತರಗತಿಯ ಅನಘ ಸ್ವಾಗತಿಸಿ, ಕುಮಾರಿ ಯಶ್ವಿ ಅತಿಥಿಗಳನ್ನು ಪರಿಚಯಿಸಿ, ಕುಮಾರಿ ಹ್ಯಾಪಿ ವಂದಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ ಎಂ ಆರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿಂದಿ ಶಿಕ್ಷಕಿಯರಾದ ಮೆನಿತ ಕೆಎಂ ಮತ್ತು ಮಂಜುನಾಥ್ ರೂಪುಗೊಳಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಸುಮಲತರವರು ತಮ್ಮ ಸಹಕಾರವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಹಿಂದಿ ಭಾಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Related posts

ಅತ್ಯಂತ ಅಪರೂಪದ ಕುಂಭಮೇಳದಲ್ಲಿ ಪವಿತ್ರ ಸ್ಥಾನಗೈದ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಗೈಡ್ ವಿದ್ಯಾರ್ಥಿನಿ ನಿಷ್ಕ ಹೆಗ್ಡೆ ಇವರ ಕೈಚಳಕದಿಂದ ಮೂಡಿದ ಪರಿಸರ ಸ್ನೇಹಿ ಗಣಪತಿ

Suddi Udaya

ಲಾಯಿಲ ಯುವಕರಿಂದ ಮಾದರಿ ಕಾರ್ಯಕ್ರಮ: ಶ್ರಮದಾನದ ಮೂಲಕ ರಸ್ತೆ ಬದಿ ಸ್ವಚ್ಛತೆ

Suddi Udaya

ನಾರಾವಿ ತುಳು ಶಿವಳ್ಳಿ ವಲಯದ ಆಟಿಡೊಂಜಿ ದಿನ

Suddi Udaya

ಉಜಿರೆ ಅರಳಿ ಮಿತ್ರ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ಪದಾಧಿಕಾರಿಗಳ ಆಯ್ಕೆ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಲಮಂಗಲ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ವಿತರಣೆ

Suddi Udaya
error: Content is protected !!