ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರ ಪುತ್ರ ಅಯಾನ್ಶ್ ಬಂಗೇರರ ಐದನೇ ವರ್ಷದ ಹುಟ್ಟು ಹಬ್ಬದ ಆಚರಣೆಯು ಬಳಂಜದ ಸುಧಾಮ ಮನೆಯಲ್ಲಿ ಜರುಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಂಜಿತ್ ಎಚ್ ಡಿ ಯವರು ವಹಿಸಿಕೊಂಡು, ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವಧ್ಯಕ್ಷರನ್ನು, ಘಟಕದ ಪೂರ್ವ ಅಧ್ಯಕ್ಷರುಗಳನ್ನು ಗೌರವಿಸಲಾಯಿತು. ನಂತರ ಜೆಸಿ ಸಮೀಕ್ಷಾ ಶಿರ್ಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಮ್ ತುಂಗಪ್ಪ ಬಂಗೇರ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಎಚ್ ಧರ್ಣಪ್ಪ ಪೂಜಾರಿ, ಭಾರತೀಯ ಮಾಜ್ಡೂರ್ ಸಂಘದ ಜಿಲ್ಲಾಧ್ಯಕ್ಷರಾದ ಅಡ್ವಾಕೇಟ್ ಅನಿಲ್ ಕುಮಾರ್, ಅಳದಂಗಡಿ ವ್ಯವಸಾಯ ಕೃಷಿ ಪತ್ತಿನ ಸಹಕಾರಿ ಸಂಘ (ನಿ )ದ ಅಧ್ಯಕ್ಷರಾದ ರಾಕೇಶ್ ಹೆಗ್ಡೆ, ನಿರ್ದೇಶಕರುಗಳಾದ ಎಚ್ ದೇಜಪ್ಪ ಪೂಜಾರಿ ಸುಧಾಮ, ದೇವಿ ಪ್ರಸಾದ್ ಶೆಟ್ಟಿ, ಬಳಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಶೋಧರ ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ಸದಾನಂದ ಸಾಲಿಯಾನ್, ಜೆಸಿಐ ಮಡಂತ್ಯಾರ್ ನ ಅಧ್ಯಕ್ಷರಾದ ವಿಕೇಶ್ ಮಾನ್ಯ, ವಲಯದ ನಿರ್ದೇಶಕರಾದ ಅಶೋಕ್ ಕುಮಾರ್ ಮಡಾಂತ್ಯಾರ್, ಬೆಳ್ತಂಗಡಿ ಘಟಕದ ಪೂರ್ವ ಅಧ್ಯಕ್ಷರುಗಳಾದ ಸುಭಾಷ್ ಚಂದ್ರ ಎಂ ಪಿ, ರವೀಂದ್ರ ಶೆಟ್ಟಿ ಬಳಂಜ, ಸಂತೋಷ್ ಕುಮಾರ್ ಕಾಪಿನಡ್ಕ, ವಸಂತ ಶೆಟ್ಟಿ ಶ್ರದ್ಧಾ, ಸಂತೋಷ್ ಪಿ ಕೋಟ್ಯಾನ್, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ ಲೈಲಾ, ಪ್ರಸಾದ್ ಬಿ ಉಜಿರೆ, ಜೆಸಿರೇಟ್ ಪೂರ್ವ ಅಧ್ಯಕ್ಷರಾದ ಉಮಾ ರಾವ್, ಪವಿತ್ರ ಚಿದಾನಂದ, ಅಮೃತ ಎಸ್ ಕೋಟ್ಯಾನ್, ಆಶಾ ಪ್ರಶಾಂತ್, ಉಪಾಧ್ಯಕ್ಷರುಗಳಾದ ಸುಧೀರ್ ಕೆ ಎನ್, ಶೈಲೇಶ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಲೇಡಿ ಜೇಸಿ ಸಂಯೋಜಕರಾದ ಶ್ರುತಿ ರಂಜಿತ್, ಜೊತೆ ಕಾರ್ಯದರ್ಶಿಯಾದ ಪ್ರಮೋದ್ ಕಕ್ಕಿಂಜೆ, ಪ್ರೀತಿ ರತಿಶ್, ಮಧುರ ರಾಘವ್, ರಕ್ಷಿತಾ ಶೆಟ್ಟಿ,ಜಿತೇಶ್, ರತ್ನಾಕರ್, ಲತೇಶ್ ಪೆರಾಜೆ, ರಕ್ಷಿತ್, ದೀಪಕ್ ಎಚ್ ಡಿ, ಜಗದೀಶ್, ಸರಿತಾ ಪ್ರವೀಣ್ ಉಪಸ್ಥಿತರಿದ್ದರು.
ಗುರುನಾರಾಯಣ ಸ್ವಾಮಿ ಸೇವಾ ಸಂಘ ಬಳೆಂಜದ ನಿಕಟಪೂರ್ವಧ್ಯಕ್ಷರಾದ ಪ್ರವೀಣ್ ಕುಮಾರ್ ಎಚ್ಎಸ್, ಮಾಜಿ ಅಧ್ಯಕ್ಷರಾದ ತಿಮಪ್ಪ ಪೂಜಾರಿ ನಿಟ್ಟಡ್ಕ, ಯುವರಾಜ ಎಲ್ಯೊಟ್ಟು, ಕೃಷ್ಣಪ್ಪ ಪೂಜಾರಿ ಬೊಂಟ್ರೋಟು, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಭಾರತಿ ಸಂತೋಷ್ , ಬ್ರಹ್ಮಶ್ರೀ ಭಜನಾ ಮಂಡಳಿ ಬಳಂಜದ ಸಂಯೋಜಕರಾದ ಹರೀಶ್ ವೈ, ಸರ್ವೋದಯ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಸುರೇಶ್ ಹೇವ, ಪ್ರಮುಖರಾದ ಪದ್ಮ ಪೂಜಾರಿ ಗೇರುಕಟ್ಟೆ, ಸತೀಶ್ ಪಡಂತ್ರ ಬೆಟ್ಟು, ಧನ್ಯಕುಮಾರ್, ಮಾಧವ ಬಂಗೇರ, ರತನ್ ಪುಂಜಾಲಕಟ್ಟೆ, ಪ್ರಕಾಶ್ ಬಂಗೇರ, ಜೆರಾಮ್ ಲೋಬೊ, ಗಣೇಶ್ ಸಂಭ್ರಮ, ಪುರಂದರ ಪೆರಾಜೆ, ಯೋಗೀಶ್, ಗಿರೀಶ್ ನಿಟ್ಟಡ್ಕ, ಪುಷ್ಪ ಗಿರೀಶ್, ಸಂತೋಷ, ಅಶ್ವಿನ್, ಹರೀಶ್ ಮಜ್ಜೆನಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇದಿಕೆ ಆಹ್ವಾನವನ್ನು ಪೂರ್ವ ಅಧ್ಯಕ್ಷರಾದ ಚಿದಾನಂದ ಇಡ್ಯಾ, ಜೆಸಿ ವಾಣಿಯನ್ನು ಜೆಜೆಸಿ ದೀಪ್ತಿ ಕುಲಾಲ್ ಹಾಗೂ ಕಾರ್ಯದರ್ಶಿ ಅನುದೀಪ್ ಜೈನ ರವರು ಧನ್ಯವಾದವನ್ನು ಸಲ್ಲಿಸಿದರು.