ತಣ್ಣೀರುಪoತ ವಲಯದ ಕರಾಯ ಕಾರ್ಯಕ್ಷೇತ್ರದಲ್ಲಿ ವಿಕ್ರಂ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಕರಾಯ ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸದಸ್ಯರು ಯಾವ ರೀತಿ ಆರ್ಥಿಕ ವ್ಯವಹಾರ ಕಲಿತುಕೊಂಡ್ರು, ಯೋಜನೆಯಿಂದ ಸದಸ್ಯರಿಗೆ ಹಾಗೂ ಸಮಾಜಕ್ಕೆ ಆಗಿರುವ ಅನುಕೂಲತೆಗಳ ಬಗ್ಗೆ ತಿಳಿಸಿಕೊಟ್ಟರು, ಒಕ್ಕೂಟದ ಅಧ್ಯಕ್ಷ ರಘುರಾಮ್ ಶೆಟ್ಟಿ ಯೋಜನೆಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಸದಸ್ಯರು ಬಳಕೆ ಮಾಡಿಕೊಳ್ಳಬೇಕು ಪ್ರಗತಿನಿಧಿ ಬ್ಯಾಂಕಿಂಗ್ ವ್ಯವಹಾರವನ್ನು ಸದಸ್ಯರು ಅಚ್ಚುಕಟ್ಟಾಗಿ ವ್ಯವಹರಿಸಬೇಕು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ಮೀನಾಕ್ಷಿಯವರು ಜ್ಞಾನ ವಿಕಾಸ ಕಾರ್ಯಕ್ರಮದಿಂದ ಸಿಗುವ ಪ್ರೀತಿ, ವಾತ್ಸಲ್ಯ, ಶಿಸ್ತು ಹಾಗೂ ಭಾಗವಹಿಸುವಿಕೆ, ಗುರುತಿಸುವಿಕೆ ಹಾಗೂ ತಾಯಿ ವಾತ್ಸಲ್ಯದ ಮಮತೆಯ ಬಗ್ಗೆ ಸದಸ್ಯರಿಗೆ ತಿಳಿಸಿದರು. ವಲಯ ಮೇಲ್ವಿಚಾರಕರು ಗುಣಕರ್ ಶುಭ ಹಾರೈಸಿದರು,
ವಿಕ್ರಂ ಕೇಂದ್ರದ ಸದಸ್ಯರು ಜಾನಪದ ಗೀತೆಯ ನೃತ್ಯ ಹಾಡು, ಆಟೋಟ ಸ್ಪರ್ಧೆಗಳನ್ನು ಮಾಡಿದರು, ಜ್ಞಾನ ವಿಕಾಸ ಸಮನ್ವಯಧಿಕಾರಿ ಪೂರ್ಣಿಮಾ ನಿರೂಪಿಸಿ ಸೇವಾಪ್ರತಿನಿಧಿ ಸಂದ್ಯಾ ಸ್ವಾಗತಿಸಿ ಕೇಂದ್ರ ಸೇವಾಪ್ರತಿನಿಧಿ ಸುಜಾತ ಧನ್ಯವಾದವಿತ್ತರು.