22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ : ತಾಲೂಕು ಆಶಾ ಕಾರ್ಯಕರ್ತರ ಸಭೆ

ಬೆಳ್ತಂಗಡಿ: ತಾಲೂಕು ಆಶಾ ಕಾರ್ಯಕರ್ತರ ಸಭೆಯು ಸೆ.28ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆವಿ ಭಟ್ ಮಾತನಾಡಿ ಆಶಾ ಕಾರ್ಯಕರ್ತೆಯರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದು, ಕೊರೋನ ಸಂದರ್ಭದಲ್ಲಿ ಬೀದಿಗಿಳಿದು ಜನರ ಸೇವೆ ಮಾಡಿದ್ದಾರೆ. ಆಶಾಕಾರ್ಯಕರ್ತೆಯರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಉಚಿತವಾದ ಆರೋಗ್ಯ ಸೌಲಭ್ಯವನ್ನು ಒದಗಿಸಬೇಕು. ಮುಂದೆ ನಡೆಯುವಂತಹ ಹೋರಾಟಗಳಲ್ಲಿ ನಾವೆಲ್ಲರೂ ಒಟ್ಟಾದರೆ ಮಾತ್ರ ನಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸುತ್ತದೆ ಎಂದರು.

ಈ ವೇಳೆ ಅ.26-27 ರಂದು ಮೈಸೂರಿನಲ್ಲಿ ನಡೆಯಲಿರುವ 4ನೇ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನದ ಪೋಸ್ಟರ್ ನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಎಐಯುಟಿಯುಸಿ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮೀ, ನಗರ ಪಂಚಾಯತ್ ಅಧ್ಯಕ್ಷೆ ಲತಾ ಉಪಸ್ಥಿತರಿದ್ದರು.

ಬೆಳ್ತಂಗಡಿ ತಾಲೂಕು ಯೂನಿಯನ್ ಅಧ್ಯಕ್ಷೆ ಎಂ.ಎನ್. ಗುಲಾಬಿ ಸ್ವಾಗತಿಸಿ, ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ ನಿರೂಪಿಸಿ, ಕಾರ್ಯದರ್ಶಿ ಕೇಶವತಿ ಧನ್ಯವಾದವಿತ್ತರು.

Related posts

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ ಚಿದಾನಂದ ಪೂಜಾರಿ ಆಯ್ಕೆ

Suddi Udaya

ಬೆಳ್ತಂಗಡಿ-ಉಪ್ಪಿನಂಗಡಿ ಖಾಸಗಿ ಬಸ್ ನೌಕರರ ಸಂಘದ ಪದಗ್ರಹಣ

Suddi Udaya

ಬಿಜೆಪಿ‌ ಅಲ್ಪಸಂಖ್ಯಾತ ಮೋರ್ಚಾದಿಂದ ಶಾಸಕರ ಹುಟ್ಟುಹಬ್ಬ ಆಚರಣೆ

Suddi Udaya

ಬೂಡುಜಾಲು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya

ಸುಳ್ಯ ಕೆರ್ಪಳ ಪಯಸ್ಸಿನಿ ಯುವಕ ಮಂಡಲ ವತಿಯಿಂದ ಲಕ್ಷ್ಮಿನಾರಾಯಣರವರಿಗೆ ಪಯಸ್ಸಿನಿ ಗೌರವ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಕಮಲ್ ತೇಜು ರಾಜಪೂತ್ ನೇಮಕ

Suddi Udaya
error: Content is protected !!