ಉಜಿರೆ : ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಕಾಲೇಜು ಉಜಿರೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆ ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟವು ಇಂದ್ರಪ್ರಸ್ತ ಸಭಾಂಗಣ ಉಜಿರೆ ಇಲ್ಲಿ ಸೆ 27 ನಡೆದಿರುತ್ತದೆ.
ಕಬಡ್ಡಿ ಪಂದ್ಯಾಟದ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳು ಡಾI ಎಸ್ ಸತೀಶ್ಚಂದ್ರ ವಿಜೇತರಿಗೆ ಪ್ರಶಸ್ತಿಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಧಾನ ನಿರ್ದೇಶಕರು ಎಂ ಜನಾರ್ದನ ಕ್ರೀಡಾಪಟುಗಳಿಗೆ ವೈಯಕ್ತಿಕ ವಿಭಾಗದಲ್ಲಿ ಮಿಂಚಿದ ಕ್ರೀಡಾಪಟುಗಳಿಗೆ ಬಹುಮಾನವನ್ನು ನೀಡಿದರು.
ಈ ಪಂದ್ಯಾಟದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಪ್ರಮೋದ್ ಕುಮಾರ್ ವಹಿಸಿಕೊಂಡಿರುತ್ತಾರೆ.
ಕಾಲೇಜಿನ ಉಪ ಪ್ರಾಂಶುಪಾಲರು ಡಾI ರಾಜೇಶ್ ಕೆ, ಹಾಗೂ ಕ್ರೀಡಾ ಸಂಘದ ಕಾರ್ಯದರ್ಶಿಗಳು ರಮೇಶ್ ಎಚ್ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಮಹಾವೀರ್ ಜೈನ್ ನಿರೂಪಿಸಿದರು. ಬಹುಮಾನ ವಿತರಣ ಕಾರ್ಯಕ್ರಮವನ್ನು ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ ಬಿ ಪೂಂಜ ನೆರವೇರಿಸಿರುತ್ತಾರೆ.
ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ: ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ತಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ತಂಡ, ದ್ವಿತೀಯ ಬಹುಮಾನ ಮೂಡಬಿದ್ರೆ ತಾಲೂಕನ್ನು ಪ್ರತಿನಿಧಿಸಿದ ತಂಡ ಆಳ್ವಾಸ್ ಕಾಲೇಜು ಮೂಡಬಿದ್ರೆ
ವೈಯಕ್ತಿಕ ವಿಭಾಗದಲ್ಲಿ: ಉತ್ತಮ ದಾಳಿಗಾರನಾಗಿ ಪರಶುರಾಮ :ಆಳ್ವಾಸ್ ಕಾಲೇಜು ಮೂಡಬಿದ್ರೆ. ಉತ್ತಮ ಸವ್ಯಸಾಚಿ: ಆಟಗಾರನಾಗಿ ಸುಮುಕ್ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಹಾಗೂ ಉತ್ತಮ ಹಿಡಿತಗಾರನಾಗಿ ಚಿನ್ಮಯ್ ಗೌಡ : ಎಸ್ ಡಿ ಎಂ ಕಾಲೇಜು ಉಜಿರೆ ಇವರು ಪಡೆದುಕೊಂಡಿರುತ್ತಾರೆ.