ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಡೇವಿಡ್ ಜೈಮಿ ಕೊಕ್ಕಡ ರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಜಲ ಸಂರಕ್ಷಣಾ ವಿಧಾನಗಳು ಮತ್ತು ಅದನ್ನು ಜನ ಸಾಮಾನ್ಯರಿಗೆ ತಲುಪಿಸುವ ಜಾಗೃತಿ, ಅಭಿಯಾನಗಳ ಮೂಲಕ ಮಳೆ ಕೊಯ್ಲು ಫಿಲ್ಟರ್ ಬಳಸಿಕೊಂಡು ಬಾವಿ ಮತ್ತು ಬೋರ್ವೆಲ್‌ಗಳಿಗೆ ಮರುಪೂರಣ ಮಾಡುವಂತೆ ಪ್ರೇರಣೆ ನೀಡಿ, ಅಂತರ್ಜಲ ವೃದ್ಧಿಯಲ್ಲಿ ವಿಶೇಷ ಕೊಡುಗೆಯನ್ನು ನೀಡಿದ ಡೇವಿಡ್ ಜೈಮಿ ಕೊಕ್ಕಡ ರವರನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಅಲ್ಫೋನ್ಸ ಪುಣ್ಯಕ್ಷೇತ್ರ ನೆಲ್ಯಾಡಿಯಲ್ಲಿ ಸನ್ಮಾನಿಸಲಾಯಿತು.

ಅವರು ಅಳವಡಿಸಿರುವ ಆರು ಜಲ ಸಂರಕ್ಷಣಾ ವಿಧಾನಗಳು ಹಿಂದೆಯೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವದಾಖಲೆಯಾಗಿ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಈಗ ಇನ್ನೂ ಎರಡು ವಿಧಾನಗಳನ್ನು ಹೆಚ್ಚಿಸಿ ತಮ್ಮ ಕೃಷಿ ಭೂಮಿಯಲ್ಲಿ ಎಂಟು ವಿಧಾನಗಳನ್ನು ಅಳವಡಿಸಿದ್ದು ಅಷ್ಟೂ ವಿಧಾನಗಳು ನೋಬೆಲ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ ಆಗಿರುತ್ತದೆ ಜಾಗತಿಕ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಯಲ್ಲಿನ ಸೇವೆಯನ್ನು ಧರ್ಮಗುರು ವಂ. ಫಾ. ಶಾಜಿ ಮಾಥ್ಯು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಚರ್ಚಿನ ಟ್ರಸ್ಟಿಗಳಾದ ಜೋಬಿನ್, ಅಲ್ವಿನ್, ಶಿಬು, ಅಲೆಕ್ಸ್ ಸಂಡೆ ಸ್ಕೂಲ್‌ನ ರೊಯ್, ವಿದ್ಯಾರ್ಥಿ ಮುಖಂಡ ಆಲ್ಲೊ ಮತ್ತು ವಂ.ಸಿಸ್ಟರ್ ಎಲ್ಸಿಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment

error: Content is protected !!