ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸೆ.28 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಉಜಿರೆಯಲ್ಲಿ ನಡೆದ “ಪಿನಾಕಲ್ 2024” ಸ್ಪರ್ಧೆಯಲ್ಲಿ ಪಾಲ್ಗೊಂಡು, ಸಮಗ್ರ ಚಾಂಪಿಯನ್‌ಶಿಪ್ ವಿಜೇತರಾಗಿದ್ದಾರೆ.
ಎಕ್ಸೆಲ್ ಪಿಯು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ ಜೈನ್ ಅವರು, ವಾಣಿಜ್ಯ ವಿದ್ಯಾರ್ಥಿಗಳ ಪ್ರಥಮ ವರ್ಷದ ಮೊದಲ ಪ್ರಯತ್ನದಲ್ಲಿಯೇ ಈ ಅದ್ಭುತ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಪ್ರಾಂಶುಪಾಲರಾದ ಡಾ. ನವೀನ್ ಕುಮಾರ ಮರಿಕೆ ಅವರು, ಈ ರೀತಿಯ ಮ್ಯಾನೇಜ್‌ಮೆಂಟ್ ಫೆಸ್ಟ್‌ಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಸಹಕಾರಿ ಎಂದು ತಿಳಿಸಿದರು.
ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ , ಹಾಗೂ ವಿಭಾಗ ಮುಖ್ಯಸ್ಥರಾದ ಪ್ರಸನ್ನ ಭೋಜ ಅವರ ಮಾರ್ಗದರ್ಶನದಲ್ಲಿ, ವಾಣಿಜ್ಯ ವಿಭಾಗದ ಉಪನ್ಯಾಸಕರು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ್ದರು.
“ಪಿನಾಕಲ್ 2024” ಸ್ಪರ್ಧೆಯಲ್ಲಿ ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉಜ್ವಲ ಸಾಧನೆ ಮಾಡಿದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದಿದ್ದಾರೆ.
ಪ್ರಥಮ ಸ್ಥಾನ ವಿಜೇತರಾದ ವಿಭಾಗಗಳು: ರಸ ಪ್ರಶ್ನೆ ಸ್ಪರ್ಧೆ: ಶ್ರೀವತ್ಸ, ಋತ್ವಿಕ್, ಮಾರ್ಕೆಟಿಂಗ್ ಸ್ಪರ್ಧೆ: ನಂದನ್, ಅಭಿನವ, ಮಾರ್ಕೆಟಿಂಗ್ ಸ್ಪರ್ಧೆ: ಅನಿಶಾ, ಮಿಸ್ಬಾ ಅಂಜುಮ್, ದ್ವಿತೀಯ ಸ್ಥಾನ ವಿಜೇತರಾದ ವಿಭಾಗಗಳು: ಇವೆಂಟ್ ಮ್ಯಾನೇಜ್‌ಮೆಂಟ್: ತನಯ್, ಭವೀಶ್,ನೃತ್ಯ ಸ್ಪರ್ಧೆ:ದಿಯಾ, ವಿದ್ಯಾ ಗೌರಿ, ಅಶಿತಾ, ದರ್ಶಿನಿ.