ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಔಷಧಿ ‌ವ್ಯಾಪಾರಸ್ಥರ ಸಂಘ: ಜಾಗತಿಕ ಔಷಧಿ ತಜ್ಞರ ದಿನದ ಆಚರಣೆ

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಜಾಗತಿಕ ಔಷಧಿ ತಜ್ಞರ ದಿನದ ಆಚರಣೆ ಸೆ.29ರಂದು ರೋಟರಿ ಸೇವಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಪೂರನ್ ವರ್ಮ ಅವರು ಉದ್ಘಾಟಿಸಿ ಬೆಳ್ತಂಗಡಿ ತಾಲೂಕಿನ ಔಷಧಿ ವ್ಯಾಪಾರಿಗಳ ಕಾರ್ಯ ಅಭಿನಂದನಾರ್ಹ ಹಾಗೂ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎನ್.ಎಂ. ಜೋಸೆಫ್, ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಗೌಡ, ಸೌತ್ ಕೆನೆರಾ ಡಿಸ್ಟ್ರಿಕ್ಟ್ ಕೆಮಿಸ್ಟ್ ಎಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ನ ಅಧ್ಯಕ್ಷ ಅರುಣ್ ಶೆಟ್ಟಿ, ಕಾರ್ಯದರ್ಶಿ ಡಾ.ಎ.ಕೆ ಜಮಾಲ್, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ, ಕಾರ್ಯದರ್ಶಿ ಮಾಧವ ಗೌಡ, ಕೋಶಾಧಿಕಾರಿ ಗಣಪತಿ ಭಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಫಾರ್ಮಸಿಸ್ಟ್ ಮಡಂತ್ಯಾರ್ ನ ಮಹಾವೀರ ಮೆಡಿಕಲ್ಸ್ ನ ಉದಯಕುಮಾರ ಜೈನ್ ಹಾಗೂ ಹಿರಿಯ ಔಷಧಿ ವ್ಯಾಪಾರಿ ವೇಣೂರಿನ ಮಂಜುಶ್ರೀ ಮೆಡಿಕಲ್ಸ್ ನ ಶ್ರೀಮತಿ ಜಯಾ ಭಾರಧ್ವಜ್ ಅವರನ್ನು‌ ಸನ್ಮಾನಿಸಲಾಯಿತು.

ಅದೇ ರೀತಿ ಶ್ರೀನಿವಾಸ ಮೆಡಿಕಲ್‌ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಎಂ.ಬಿ.ಬಿ.ಎಸ್ ಪದವಿ‌ ಪಡೆದ ಡಾ.ಮನೀಷಾ.ಎಂ ಅವರನ್ನು ಹಾಗೂ ಕಳೆದ 25 ವರ್ಷಗಳಿಂದ ಜವಾಬ್ದಾರಿಯುತವಾಗಿ ಎಲ್ಲಾ ಔಷಧಿ ಅಂಗಡಿಗಳಿಗೆ ಮಂಗಳೂರಿನಿಂದ ಔಷಧಿ ಸರಬರಾಜು ‌ಮಾಡುತ್ತಿರುವ ಶ್ರೀ ಕೇಶವ ಮೂರ್ತಿ ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಿನ 10 ಜನ ದೈಹಿಕ ಹಾಗೂ ಆರ್ಥಿಕ ಅಶಕ್ತರನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವನ್ನು ನೀಡಲಾಯಿತು ಹಾಗೂ ಓರ್ವ ವ್ಯಕ್ತಿಗೆ ವೀಲ್ ಚೇರ್ ಒಂದನ್ನು ನೀಡಲಾಯಿತು.

ಶ್ರೀಮತಿ ಸುಜಾತ ಗಣಪತಿ ಭಟ್ ಪ್ರಾರ್ಥಿಸಿದರು. ಉದಯ ಕುಮಾರ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ಮಾಧವ ಗೌಡ ಸಂಘದ ವರದಿಯನ್ನು ವಾಚಿಸಿದರು. ಸುಜಿತ್ ಭಿಡೆ ವಂದಿಸಿದರು.

Related posts

ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಅನುಮತಿ ದೊರಕಿರುವ ಬಗ್ಗೆ ಎಕ್ಸೆಲ್ ಟೆಕ್ನೋ ಸ್ಕೂಲ್ ನಿಂದ ಸ್ಪಷ್ಟೀಕರಣ

Suddi Udaya

ಉಜಿರೆಯಿಂದ ಬೆಳಾಲು ಕೊಯ್ಯೂರು ಕೆಎಸ್ಆರ್ ಟಿ. ಸಿ ಬಸ್ ಸಂಚಾರ ಉದ್ಘಾಟನೆ

Suddi Udaya

ಶ್ರೀ ಎರ್ನೋಡಿ ಕ್ಷೇತ್ರ ಉಜಿರೆ ವಷಾ೯ವಧಿ ಜಾತ್ರೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕ್ರಿಕೆಟ್ ಪಂದ್ಯಾಟದ ಮೂಲಕ ಸಹಾಯನಿಧಿ ಸಂಗ್ರಹಿಸಿದ ಮಾರ್ನಿಂಗ್ ಫ್ರೆಂಡ್ಸ್ ಅನಾರೋಗ್ಯದಿಂದ ಬಳಲುತ್ತಿದ್ದ ಕೀರ್ತನ್ ಚಿಕಿತ್ಸೆಗೆ ರೂ.2.25 ಲಕ್ಷ ಹಸ್ತಾಂತರ

Suddi Udaya

ಮದ್ದಡ್ಕ: ಬೈಕ್ ಮತ್ತು ಸ್ಕೂಟಿ ಅಪಘಾತ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರದ ವಿರುದ್ದ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ; ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಬೃಹತ್ ಸಮಾವೇಶ

Suddi Udaya
error: Content is protected !!