April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಂದು ಲಾಯಿಲ ಹಾಗೂ ಬಿ. ರಾಮಣ್ಣ ಶೆಟ್ಟಿ ಮಾಲಾಡಿ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಲಾಯಿಲ : ಇತ್ತೀಚಿಗೆ ನಿಧನರಾದ ಕಾಂಗ್ರೆಸ್ಸಿನ ಮುಖಂಡರು, ತಾಲೂಕು ಪಂಚಾಯತಿನ ಉಪಾಧ್ಯಕ್ಷರು, ದಲಿತ ಸಮುದಾಯದ ನಾಯಕರಾದ ಚಂದು ಲಾಯಿಲ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಂದಾಳು ಶಿಸ್ತಿನ ಸೈನಿಕ ಮತ್ತು ಮಾಜಿ ಸಚಿವರಾದ ಕೆ. ಗಂಗಾಧರ ಗೌಡರ ಅಭಿಮಾನಿಗಳಲ್ಲೊಬ್ಬರಾದ ಬಿ. ರಾಮಣ್ಣ ಶೆಟ್ಟಿ ಮಾಲಾಡಿ ಇವರಿಗೆ ಸೆ. 30 ರಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷರ ಕಚೇರಿ ಬೆಳ್ತಂಗಡಿ ಇಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅರ್ಪಿಸಲಾಯಿತು.


ಸಭೆಯಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷರು ಮತ್ತು ಮಾಜಿ ಸಚಿವ ಕೆ. ಗಂಗಾಧರ ಗೌಡರು ಶ್ರದ್ಧಾಂಜಲಿ ಅರ್ಪಿಸಿ, ಬಿ. ರಾಮಣ್ಣ ಶೆಟ್ಟಿ ಅವರು ಪಕ್ಷದ ಸೈನಿಕ ಕಾರ್ಯಕರ್ತರಾಗಿದ್ದು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರ ಒಡನಾಟದಲ್ಲಿದ್ದು, ಜನಸೇವೆ ಮಾಡಿದ ಮಹಾನಾಯಕ ಎಂದು ಹಾಗೂ ಚಂದು ಲಾಯಿಲ ಬೆಳ್ತಂಗಡಿ ತಾಲೂಕಿನ ಉಪಾಧ್ಯಕ್ಷರಾಗಿ ಬಹಳಷ್ಟು ಸಮಾಜ ಸೇವೆ ಮಾಡಿ, ತನ್ನ ಅಪಾರ ಅಭಿಮಾನಿ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ಬಹು ಮುಖ್ಯ ಪಾತ್ರವಹಿಸುವವರಾಗಿರುತ್ತಾರೆ. ಇವರುಗಳ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ. ರಾಜಶೇಖರ್ ಅಜ್ರಿ, ಪ್ರಭಾಕರ ನಲ್ಕೆ, ಮೋಹನ್ ಗೌಡ ಕಲ್ಮಂಜ ಇವರು ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.


ಈ ಸಭೆಯಲ್ಲಿ ಯು.ಎ. ಹಮೀದ್ ಉಜಿರೆ, ಅಬ್ದುಲ್ ರಹಿಮಾನ್ ಪಡ್ಪು, ಕೆ. ಆನಂದ ಶೆಟ್ಟಿ, ಜಗದೀಶ್, ಬಿ. ಮೆಹಬೂಬ್, ಕೆ. ಎಸ್. ಅಬ್ದುಲ್ಲಾ, ರಮೇಶ್ ರೆಂಕೆದಗುತ್ತು, ಸತ್ತಾರ್ ಸಾಹೇಬ್, ಅಗಸ್ಟಿನ್ ನಡ, ಕೆ. ಬಾಲಕೃಷ್ಣ ಗೌಡ, ಗುರುಪ್ರಸಾದ್ ಮಾಲಾಡಿ, ಕೃಷ್ಣ ಶೆಟ್ಟಿ ಮಾಲಾಡಿ, ಸಮದ್ ಬೆಳ್ತಂಗಡಿ, ನವೀನ್ ಪ್ರಸಾದ್ ಗೌಡ, ರಮೀಝ್ ರಾಝ ಬೆಳ್ತಂಗಡಿ, ನಿಖಿಲ್ ಬಿ. ಗೌಡ, ವೆಂಕಣ್ಣ ಲಾಯಿಲ, ಅಣ್ಣು ಲಾಯಿಲ, ಲಕ್ಷ್ಮಣ ಫಂಡಿಜೆ ಉಪಸ್ಥಿತರಿದ್ದರು. ಮೋಹನ್ ಗೌಡ ಕಲ್ಮಂಜ ಸ್ವಾಗತಿಸಿ, ವಂದಿಸಿದರು.

Related posts

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ : ನಡ ಸ. ಪ. ಪೂ ಕಾಲೇಜಿನ ವಿದ್ಯಾರ್ಥಿನಿ ಕು. ಸವಿತಾ ದ್ವಿತೀಯ ಸ್ಥಾನ

Suddi Udaya

ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಗೇರುಕಟ್ಟೆ: ರೇಷ್ಮೆ ರೋಡ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಸ್ಸಾಂ ಮುಖ್ಯಮಂತ್ರಿ ಗೌರವಾರ್ಪಣೆ

Suddi Udaya

ಪಟ್ರಮೆ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿ

Suddi Udaya

ಲಾಯಿಲ ದೊಂಪದ ಬಲಿ ಉತ್ಸವ

Suddi Udaya
error: Content is protected !!