27.5 C
ಪುತ್ತೂರು, ಬೆಳ್ತಂಗಡಿ
April 3, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾವರ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕುಲಾಲ್, ಕಾರ್ಯದರ್ಶಿಯಾಗಿ ರತ್ನಾಕರ ಹೆಚ್ ಆಯ್ಕೆ

ನಾವರ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ನಾವರ ಗೋಳಿಕಟ್ಟೆ ಇದರ ಪದಾಧಿಕಾರಿಗಳ ಆಯ್ಕೆಯು ಸೆ.29 ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


21 ನೇ ವರ್ಷದ ಶಾರದೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಕುಲಾಲ್ ದೇವರಗುಡ್ಡೆ ಮತ್ತು ಕಾರ್ಯದರ್ಶಿಯಾಗಿ ರತ್ನಾಕರ ಹೆಚ್ ಹಿಮರಡ್ಡ ಕುದ್ಯಾಡಿ ಇವರನ್ನು ಆಯ್ಕೆ ಮಾಡಲಾಗಿದೆ.


2024 ರ ಶಾರದಾ ಪೂಜಾ ಮಹೋತ್ಸವ ಅ.9 ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದ್ದು ಒಂದೇ ದಿನ ಪೂಜಾ ಕೆಲಸಕಾರ್ಯ ನಡೆಯಲಿದೆ.
ಸಂಜೆ ಅಳದಂಗಡಿ ಮಹಾಗಣಪತಿ ದೇವಸ್ಥಾನದ ಬಳಿ ಇರುವ ಫಲ್ಗುಣಿ ನದಿಯಲ್ಲಿ ಶಾರದಾ ದೇವಿ‌ ಮಣ್ಣಿನ ‌ಮೂರ್ತಿಯ ವಿಸರ್ಜನೆ ನಡೆಯಲಿರುವುದು.

ಸಭೆಯಲ್ಲಿ ಪ್ರಧಾನ ಸಂಚಾಲಕರಾದ ವಿಜಯ ಕುಮಾರ್ ಜೈನ್, ಸಂಚಾಲಕರಾದ ರಾಜೂ ಸಾಲ್ಯಾನ್, ವೀರೇಂದ್ರ ಕುಮಾರ್ ರಾಜಪಾದೆ, ರವಿ ಪೂಜಾರಿ ಹಾರಡ್ಡೆ, ನಿತ್ಯಾನಂದ ಯೋಗ ಕ್ಷೇಮ ನಾವರ, ಸದಾನಂದ ಬಿ.ಕುದ್ಯಾಡಿ ಮುಂತಾದವರು ಉಪಸ್ಥಿತರಿದ್ದರು.

Related posts

ಉಜಿರೆ ಹಳೆಪೇಟೆ ಮಸೀದಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

Suddi Udaya

ಮೇ. 6: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ರವರ ಚುನಾವಣಾ ಪ್ರಚಾರದ ಅಂಗವಾಗಿ ಬೃಹತ್ ರೋಡ್ ಶೋ

Suddi Udaya

ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ: ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ

Suddi Udaya

ಕುತ್ಲೂರು ಸ.ಉ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಳೆ ವಿದ್ಯಾರ್ಥಿಗಳಿಂದ ಮಕ್ಕಳಿಗೆ ಐಡಿ ಕಾರ್ಡ್ ಮತ್ತು ಪ್ರೋತ್ಸಾಹ ಧನ ವಿತರಣೆ

Suddi Udaya

ಬೆಳ್ತಂಗಡಿ: ತಾಲೂಕು ಮಟ್ಟದ ಪ.ಜಾತಿ ಪ. ಪಂಗಡದ ಹಿತರಕ್ಷಣಾ ಸಮಿತಿ ಸಭೆ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ‘ಗಝಲ್ ‘ ಸ್ಪರ್ಧೆ: ಮಚ್ಚಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಯಜ್ನೇಶ್ ಪ್ರಥಮ ಸ್ಥಾನ

Suddi Udaya
error: Content is protected !!