ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಹೊಸಖಂಡ ಎಂಬಲ್ಲಿನ ವಿಕಲಚೇತನ ಫಲಾನುಭವಿಯಾದ ಪಕೀರ ಮುಗೇರಾ ಇವರ ಮಾಸಿಕ ಪೋಷಣಾಭತ್ಯೆಯು ಆಧಾರ್ ಚೀಟಿಯ ತಾಂತ್ರಿಕ ದೋಷದಿಂದ 2 ತಿಂಗಳಿಂದ ಸ್ಥಗಿತ ವಾಗಿರುದನ್ನು ತಿಳಿದುಕೊಂಡ ಉಜಿರೆ ಪಂಚಾಯತ್ ನ ಗ್ರಾಮೀಣ ವಿಆರ್.ಡಬ್ಲ್ಯೂ ಆದಂತಹ ವಿಪುಲ್ ಪೂಜಾರಿ ಇವರು ಸಂಬಂಧಿಸಿದ ಪಲಾನುಭವಿಯ ಆಧಾರ್ ಚೀಟಿಯ ತಾಂತ್ರಿಕ ದೋಷವನ್ನು ಸರಿಪಡಿಸಲು ಸಹಾಯ ಮಾಡುವಂತೆ ಕೋರಲು ಮನವಿ ಪತ್ರ ನೀಡಲು ಸೆ.30 ರಂದು ಸೂಚಿಸಿದ ಹಿನ್ನಲೆಯಿಂದ ಅ. 01 ರಂದು ಪಲಾನುಭವಿಯ ಬೇಡಿಕೆಯಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಹಾಗೂ ಪಂಚಾಯತ್ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದೊಂದಿಗೆ ಹಾಗೂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಯಾದ ಭವಾನಿ ಶಂಕರ್ ಇವರ ಮೆಚ್ಚುಗೆಯೊಂದಿಗೆ ತಾಲೂಕು ವಿಕಲಚೇತನರ ಮೇಲ್ವಿಚಾರಕರಾದ ಜೋನ್ ಭ್ಯಾಪ್ಟಿಸ್ಟ್ ಇವರ ಸಲಹೆ ಸೂಚನೆಯಂತೆ ಜಿಲ್ಲಾಧಿಕಾರಿಯವರ ಕಛೇರಿಯ ಆಧಾರ್ ಕೇಂದ್ರಕ್ಕೆ ಫಲಾನುಭವಿಯವರನ್ನು ಕರೆ ತಂದು ಪಕೀರಾ ಮುಗೇರಾ ಇವರ ಆಧಾರ್ ನ್ನು ಸರಿಪಡಿಸಲಾಯಿತು.
ಈ ಸಂದರ್ಭದಲ್ಲಿ ಚಿರಂಜೀವಿ, ಗ್ರಾಮೀಣ ವಿ.ಆರ್.ಡಬ್ಲ್ಯೂ, ಗ್ರಾಮ ಪಂಚಾಯತ್, ಕಣಿಯೂರು ಇವರು ಕೂಡ ಜೊತೆಗಿದ್ದು ಸಹಕರಿಸಿದರು.