April 2, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ತರಬೇತಿ ಸಮ್ಮೇಳನದಲ್ಲಿ ಸಮಗ್ರ ಪ್ರಶಸ್ತಿ.

ಬೆಳ್ತಂಗಡಿ : ಜೆಸಿಐ ಭಾರತದ ಇತಿಹಾಸದಲ್ಲಿ ವಲಯ 15 ಹಮ್ಮಿಕೊಂಡ ಪ್ರಪ್ರಥಮ ತರಬೇತಿ ಸಮ್ಮೇಳನವು ಉಡುಪಿಯ ಜೆಸಿ ಶಂಕರಪುರದಲ್ಲಿ ನಡೆಯಿತು.

ಈ ವರುಷ ಶಾಲಾ ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಹಾಗೂ ಘಟಕದಲ್ಲಿ ಹಮ್ಮಿಕೊಂಡ ಹಲವಾರು ತರಬೇತಿ ಕಾರ್ಯಕ್ರಮಗಳು ಹಾಗೂ ವಲಯವು ಮೊದಲ ಬಾರಿಗೆ ಆಯೋಜಿಸಿದ ಶ್ರಾವಣ ತರಬೇತಿ ಸಪ್ತಾಹ ಕಾರ್ಯಕ್ರಮವನ್ನು ನಡೆಸಿದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕಕ್ಕೆ ತರಬೇತಿ ಸಮ್ಮೇಳನದಲ್ಲಿ ವಲಯದ ಐದನೇ ಅತ್ಯುತ್ತಮ ಘಟಕ ಪ್ರಶಸ್ತಿಯು ಲಭಿಸಿತು.

ಸಮೇಳನದಲ್ಲಿ ನಡೆದ ಭಾಷಣ ಸ್ಪರ್ಧೆಗಳಲ್ಲಿ ಜೆಸಿ ವಿಭಾಗದಲ್ಲಿ ಘಟಕದ ಉಪಾಧ್ಯಕ್ಷರಾದ ಚಂದ್ರಹಾಸ್ ಬಳಂಜ ಪ್ರಥಮ ಸ್ಥಾನವನ್ನು, ಜೆಜೆಸಿ ವಿಭಾಗದಲ್ಲಿ ನೇವಿಲ್ ರವರು ದ್ವಿತೀಯ ಸ್ಥಾನವನ್ನು, ಬ್ಯಾನರ್ ಸ್ಪರ್ಧೆಯಲ್ಲಿ ಬೆಳ್ತಂಗಡಿ ಘಟಕವು ಪ್ರಥಮ ಸ್ಥಾನವನ್ನು ಪಡೆಯಿತು.

ರಾಷ್ಟ್ರೀಯ ತರಬೇತಿ ದಿನ, ಎಫೆಕ್ಟಿವ್ ಪಬ್ಲಿಕ್ ಸ್ಪೀಕಿಂಗ್, ನಾಯಕತ್ವ ತರಬೇತಿ ಶಿಬಿರ, ಜೆಸಿಐ ಭಾರತದ ಅಮೃತ ಮಹೋತ್ಸವದ ಪ್ರಯುಕ್ತ ನಡೆದ ತರಬೇತಿ ಕಾರ್ಯಕ್ರಮಗಳು, ಜೆಜೆಸಿ ಸಪ್ತಾಹದಲ್ಲಿ ನಡೆಸಿದ ಸ್ಕಿಲ್ ಡೆವಲಪ್ಮೆಂಟ್ ತರಬೇತಿ, ಹೊಸ ಸದಸ್ಯರಿಗೆ ನಡೆಸಿದ ತರಬೇತಿ ವಿಭಾಗಕ್ಕೆ ವಿಶೇಷ ಮನ್ನಣೆಯನ್ನು ಬೆಳ್ತಂಗಡಿ ಘಟಕವು ಪಡೆಯಿತು.

ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ಗಿರೀಶ್ ಎಸ್ ಪಿ, ಕಾರ್ಯದರ್ಶಿಗಳಾದ ಸೌಮ್ಯ ರಾಕೇಶ್, ವಲಯದ ಉಪಾಧ್ಯಕ್ಷರುಗಳು, ಬೆಳ್ತಂಗಡಿ ಘಟಕದ ಕಾರ್ಯದರ್ಶಿಗಳಾದ ಅನುದೀಪ್ ಜೈನ್, ಲೇಡಿ ಜೇಸಿ ಸಂಯೋಜಕರಾದ ಶ್ರುತಿ ರಂಜಿತ್ ಉಪಸ್ಥಿತರಿದ್ದರು.

Related posts

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ

Suddi Udaya

ಕಿಲ್ಲೂರು‌ ನೂತನ ಮಸ್ಜಿದ್ ಗೆ ಖಾಝಿ ಕೂರತ್ ತಂಙಳ್ ರಿಂದ ಶಿಲಾನ್ಯಾಸ

Suddi Udaya

ಬೆಳ್ತಂಗಡಿ: ಬಿಜೆಪಿ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಆಯ್ಕೆ

Suddi Udaya

ಲಾಯಿಲ: ಗುರು ರಾಘವೇಂದ್ರ ಸ್ವಾಮಿಯ ಮಠದಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಸ್ವಚ್ಛತಾ ಕಾರ್ಯ

Suddi Udaya

ಸರಳಿಕಟ್ಟೆಯಿಂದ ಗೋವಿಂದಗುರಿ ವರೆಗೆ ಹದಗೆಟ್ಟ ರಸ್ತೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಕರಿಕಲ್ ಶಾಖಾ ಮಠದಲ್ಲಿ ಜು.21ರಿಂದ ಆ.30ರವರೆಗೆ ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರ ಚಾತುರ್ಮಾಸ್ಯ ವ್ರತ

Suddi Udaya
error: Content is protected !!