September 6, 2026
ಶಿಕ್ಷಣ ಸಂಸ್ಥೆ

ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ: ಎನ್ ಎಸ್ ಎಸ್ ಮತ್ತು ಯುವಜನತೆ ವಿಶೇಷ ಉಪನ್ಯಾಸ

ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ,ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ 1ಮತ್ತು 2ರ ಆಶ್ರಯದಲ್ಲಿ “ಎನ್ ಎಸ್ ಎಸ್ ಮತ್ತು ಯುವಜನತೆ ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ಸೆ. 25 ರಂದುಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಮಡಂತ್ಯಾರು ಗ್ರಾ.ಪಂ ಪಿಡಿಒ ಡಾ. ಪ್ರಕಾಶ್ ಅವರು ಜೀವನದಲ್ಲಿ ಶಿಸ್ತು ಸಂಯಮ , ಸೇವಾ ಮನೋಭಾವನೆಯ ಮಹತ್ವವನ್ನು ದೃಷ್ಟಾಂತಗಳ ಮೂಲಕ ವಿವರಿಸಿದರು. ಉತ್ತಮ ಸ್ವಯಂಸೇವಕ ರಾಷ್ಟ್ರವನ್ನು ಕಟ್ಟಿ ಬೆಳೆಸುವುದರಲ್ಲಿ ತನ್ನದೇ ಆದಂತಹ ಕೊಡುಗೆಯನ್ನು ನೀಡಬಹುದು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ದತ್ತು ಗ್ರಾಮ ಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಯಿತು. ದತ್ತು ಗ್ರಾಮವಾದ ಮಡಂತ್ಯಾರ್ ನಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕಾಲೇಜು ಹಾಗೂ ಗ್ರಾಮ ಪಂಚಾಯತ್ ಮಡಂತ್ಯಾರ್ ಇವರ ಸಹಯೋಗದೊಂದಿಗೆ ನಡೆಸಿಕೊಂಡು ಹೋಗಲು ಅನುವಾಗುವಂತೆ ೩ ವರ್ಷಗಳ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ| ಮಾಧವರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂ ಎಸಿ ಸಂಚಾಲಕ ಡಾ. ಅವಿತ ಮರಿಯ ಕ್ವಾಡ್ರಸ್, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ. ಚಿತ್ರಾ ಪಡಿಯಾರ್ ಮತ್ತು ಪ್ರೊ. ಸಂತೋಷ್ ಪ್ರಭು ಉಪಸ್ಥಿತರಿದ್ದರು. ಕುಮಾರಿ ಶ್ರೀ ಲಕ್ಷ್ಮಿ ಸ್ವಾಗತಿಸಿದರು,ಕುಮಾರಿ ಕವಿತಾ ವಂದಿಸಿದರು, ಕುಮಾರಿ ವರ್ಷಿನಿ ನಿರೂಪಿಸಿದರು,

Related posts

ಪಟ್ರಮೆ: ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಚಿಣ್ಣರ ಸಂಭ್ರಮ

Suddi Udaya

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು: ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಸಮಾರಂಭ

Suddi Udaya

ಎಸ್.ಡಿ.ಎಂ. ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಉಜಿರೆ ಗ್ರಾಮ ಪಂಚಾಯತ್‌ಗೆ ಶೈಕ್ಷಣಿಕ ಅಧ್ಯಯನ ಭೇಟಿ

Suddi Udaya

ನೀಟ್ ಎಂದರೆ ಎಕ್ಸೆಲ್; ರಾಜ್ಯದಲ್ಲೇ ಮತ್ತೊಮ್ಮೆ ಅಗ್ರಸ್ಥಾನ – ನಿರಂತರ ಸಾಧನೆಗೆ ಸುಮಂತ್ ಕುಮಾರ್ ಜೈನ್ ಹರ್ಷ

Suddi Udaya

ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ ನ ಪದಗ್ರಹಣ

Suddi Udaya

ಕರಾಯ ಅಲ್ ಬಿರ್ರ್ ಸ್ಕೂಲಿನಲ್ಲಿ ಇಶ್ಕೇ ರಸೂಲ್ ಮೀಲಾದ್ ಕಾರ್ಯಕ್ರಮ: ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ

Suddi Udaya
error: Content is protected !!