April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ : ಮುಂಡಾಜೆಯ ತೇಜಲ್ ಕೆ .ಆರ್ ರವರಿಗೆ ಬೆಳ್ಳಿಯ ಪದಕ

ಬೆಳ್ತಂಗಡಿ: ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಸಿಎಂ ಕಪ್ 2024 ಇದರಲ್ಲಿ ಪುರುಷರ ವಿಭಾಗದ 110 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆ ನಿವಾಸಿಯಾದ ತೇಜಲ್ ಕೆ.ಆರ್ ಇವರು ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.

ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಇವರು ಈವರೆಗೆ ಅನೇಕ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಚಿನ್ನದ ಹಾಗೂ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ ಹಾಗೂ ಕಳೆದ ಜೂನ್ ತಿಂಗಳಲ್ಲಿ ನಡೆದ ರಾಜ್ಯಮಟ್ಟದ ಯೂತ್ ಮೀಟ್ ನಲ್ಲಿ ಕೂಡ ಚಿನ್ನದ ಪದಕವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದರು.ಇವರು ಮುಂಡಾಜೆ ನಿವಾಸಿಯಾದ ರಾಜೇಶ್ ಕೆ.ವಿ ಹಾಗೂ ಜಿನ್ಸಿ ರಾಜೇಶ್ ಇವರ ಪುತ್ರನಾಗಿರುತ್ತಾರೆ. ಇವರು ಆಳ್ವಾಸ್ ಕಾಲೇಜಿನ ಕ್ರೀಡಾ ವಿದ್ಯಾರ್ಥಿ ಆಗಿದ್ದು ತರಬೇತುದಾರರಾದ ಶಾಂತರಾಮ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯಿಂದ ಪೂರ್ವಭಾವಿ ಸಭೆ

Suddi Udaya

ತಾಲೂಕಿನ ಪ್ರಸಿದ್ದ ದೈವಪಾತ್ರಿ ರಾಮಣ್ಣ ಪೂಜಾರಿ ಹುಂಬೆಜೆ ನಿಧನ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ

Suddi Udaya

ಕೊಕ್ಕಡ: ಮಾಯಿಲಕೋಟೆ ದೈವಸ್ಥಾನದ ನಾಗಬನದಲ್ಲಿ ನಾಗದೇವರಿಗೆ ವಿಶೇಷ ಪೂಜೆ

Suddi Udaya

ಧರ್ಮಸ್ಥಳ ಸಂತಾನ ಪ್ರದ ನಾಗಕ್ಷೇತ್ರದಲ್ಲಿ ಶ್ರೀ ನಾಗದೇವರ ಬಿಂಬ ಹಾಗೂ ದೈವಗಳ ಪುನರ್ ಪ್ರತಿಷ್ಠೆ ಮಹೋತ್ಸವ

Suddi Udaya

ಶ್ರೀ ಧ. ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ -ರೇಂಜರ್ಸ್ ಸಹಯೋಗದಲ್ಲಿ ಒಂದು ದಿನದ ಶಿಬಿರ

Suddi Udaya
error: Content is protected !!